Wednesday, 11th December 2024

ʻಬಾನಲ್ಲೆ ಮಧುಚಂದ್ರಕೆʼ ನಟ ಕೆ.ಶಿವರಾಮ್’ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಬೆಂಗಳೂರು: ʻಬಾನಲ್ಲೆ ಮಧುಚಂದ್ರಕೆʼ ಸಿನಿಮಾ ನಟ ಕೆ.ಶಿವರಾಮ್ ( 71) ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಎಚ್ ಸಿ ಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟನ ಪರಿಸ್ಥಿತಿ ಚಿಂತಾಜನಕವಾಗಿದ್ದು ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ʻಬಾನಲ್ಲೆ ಮಧುಚಂದ್ರಕೆʼ , ʻವಸಂತಕಾವ್ಯʼ ಚಿತ್ರದಲ್ಲಿ ನಟಿಸಿದ್ದರು. ರಾಜಕೀಯ ರಂಗದಲ್ಲೂ ನಟ ಗುರುತಿಸಿಕೊಂಡಿದ್ದರು. ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಪ್ರೀತಿಗಾಗಿ ಆಟ, ನಾಗ, ಮೂಡಲ ಸೀಮೆಯಲಿ, ಸುಭಾಷ್, ಟೈಗರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟರಾಗಿದ್ದರು. ತಮ್ಮ ಸಿನಿ ಜೀವನದಲ್ಲಿ 2017ರವರೆಗೆ 10 ಸಿನೆಮಾದಲ್ಲಿ ನಟಿಸಿದ್ದಾರೆ.

ಕೆ ಶಿವರಾಮ್ ವೃತ್ತಿಯಲ್ಲಿ ಐಎಎಸ್ ಅಧಿಕಾರಿ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗ ಶಿವರಾಮ್. ಸುದೀರ್ಘ ಐಎಎಸ್ ವೃತ್ತಿಜೀವನದಲ್ಲಿ ಬಿಜಾಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾ ವಣೆಗೆ ಸ್ಪರ್ಧಿಸಿ ಸೋತರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.