ಬೆಂಗಳೂರು: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಲಕ್ಷ್ಮೀ ಬಾರಮ್ಮʼ ಸೀರಿಯಲ್ (Lakshmi Baramma Serial)ನಲ್ಲಿ ಮಹಾಲಕ್ಷ್ಮೀ (Lakshmi) ಬದುಕಿದ್ದಾಳೆ ಅನ್ನೋದು ವೀಕ್ಷಕರಿಗೆ ನೆಮ್ಮದಿ ತಂದಿದೆ. ಕೋರ್ಟ್ (Court)ಗೆ ಮಹಾಲಕ್ಷ್ಮೀ ಬರ್ತಿದ್ದಂತೆ ಕಾವೇರಿ (Kaveri) ಶಾಕ್ ಆದ್ರೆ ವೈಷ್ಣವ್ (Vaishnav) ಖುಷಿಯಾಗಿದ್ದಾನೆ. ತನ್ನ ಹತ್ಯೆಗೆ ಯಾರು ಪ್ರಯತ್ನಿಸಿದ್ದು ಎಂಬ ಪ್ರಶ್ನೆಗೆ ಲಕ್ಷ್ಮೀ ಉತ್ತರ ನೀಡ್ತಿದ್ದಾಳೆ. ಮಹಾಲಕ್ಷ್ಮೀ ರಾವಣನ ಪ್ರತಿಕೃತಿಯೊಳಗೆ ಹೋಗುವಂತೆ ಮಾಡಿ, ಪಟಾಕಿ ಡೀಲರ್ ಬದಲಿಸಿ, ಕೀರ್ತಿ, ಮಹಾಲಕ್ಷ್ಮೀ ಹತ್ಯೆಗೆ ಯತ್ನಿಸಿದ್ದಳು ಎಂದು ಕಾವೇರಿ ಪರ ಲಾಯರ್ ವಾದ ಮಾಡ್ತಿದ್ದಾರೆ. ಕಾವೇರಿ ಹಾಗೂ ಲಾಯರ್ ಹೇಳಿದ್ದನ್ನು ವೈಷ್ಣವ್ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿದ್ದ.
ಹೌದು, ತನ್ನ ಪತ್ನಿಯನ್ನು ಕೀರ್ತಿ ಹತ್ಯೆ ಮಾಡಿದ್ದಾಳೆ ಎಂದು ನಂಬ್ತಿದ್ದ ಸಮಯದಲ್ಲೇ ಮಹಾಲಕ್ಷ್ಮೀ ಎಂಟ್ರಿಯಾಗಿದೆ. ಈಗ ಮಹಾಲಕ್ಷ್ಮೀ ಸರದಿ. ಕಟಕಟೆಗೆ ಬಂದಿರುವ ಮಹಾಲಕ್ಷ್ಮೀ ಏನು ಉತ್ತರ ನೀಡ್ತಾಳೆ ಎಂಬ ಕಾತುರದಲ್ಲಿ ವೈಷ್ಣವ್ ಇದ್ದಾನೆ. ಮಹಾಲಕ್ಷ್ಮೀ ನೋಡ್ತಿದ್ದಂತೆ ಅರ್ಧ ಸತ್ತಿರುವ ಕಾವೇರಿ, ಮಹಾಲಕ್ಷ್ಮೀ ಕೈ ತೋರಿಸ್ತಿದ್ದಂತೆ ಸಂಪೂರ್ಣ ಕುಸಿದಿದ್ದಾಳೆ.
ಕೋರ್ಟ್ನಲ್ಲಿ ನಿಮ್ಮ ಹತ್ಯೆಗೆ ಯತ್ನ ನಡೆದಿದ್ದು ಸತ್ಯವಾ ಎಂದು ಜಡ್ಜ್ ಕೇಳುತ್ತಿದ್ದಾರೆ. ಅದಕ್ಕೆ ಉತ್ತರಿಸುವ ಮಹಾಲಕ್ಷ್ಮೀ , ಹೌದು, ನನ್ನ ಹತ್ಯೆಗೆ ಯತ್ನ ನಡೆದಿದೆ. ಆದ್ರೆ ಅದನ್ನು ಮಾಡಿದ್ದು ಕೀರ್ತಿ ಅಲ್ಲ ಎನ್ನುತ್ತಾಳೆ. ಮತ್ತ್ಯಾರು ಹೇಳಿ ಬೇಗ ಎಂದು ವೈಷ್ಣವ್ ಟೆನ್ಷನ್ನಲ್ಲಿ ಪ್ರಶ್ನೆ ಮಾಡ್ತಿದ್ದಾನೆ.
ಇದಕ್ಕೆ ಉತ್ತರ ನೀಡಿದ ಮಹಾಲಕ್ಷ್ಮೀ ಸತ್ಯವನ್ನ ಹೊರ ಹಾಕಿದ್ದು, ತನ್ನನ್ನ ಕೊಲ್ಲೋಕೆ ಪ್ರಯತ್ನಪಟ್ಟಿದ್ದು ಕಾವೇರಿ ಅಂತ ಬೆಟ್ಟು ಮಾಡಿ ತೋರಿಸಿದ್ದಾಳೆ. ಅಲ್ಲಿಗೆ ಕಾವೇರಿಯ ಎದೆಯಲ್ಲಿ ಡವ ಡವ ಶುರುವಾಗಿದ್ದು, ತಾನೇ ತೋಡಿದ ಹಳ್ಳಕ್ಕೆ ಬಿದ್ದ ತಾನೇ ಬಿದ್ದ ಕಾವೇರಿ ನನ್ನ ಕಥೆ ಮುಗಿದ ಹಾಗೆ ಲೆಕ್ಕ ಎಂದು ಭಯಭೀತಲಾಗಿದ್ದಾಳೆ. ಕಾವೇರಿಗೆ ಜೈಲು ಶಿಕ್ಷೆ ಬಹುತೇಕ ಫಿಕ್ಸ್ ಆದ ಹಾಗೆ.
ಸದ್ಯ ಕಾವೇರಿಯ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದು, ಪೊಲೀಸರಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ಒಂದಾದ್ಮೇಲೆ ಒಂದು ಟ್ವಿಸ್ಟ್ ಸೀರಿಯಲ್ಗೆ ಸಿಗ್ತಿರುವ ಕಾರಣ ಕಾವೇರಿ ಮತ್ತೇನು ಹೊಸ ಆಟ ಶುರು ಮಾಡಿದ್ದಾಳೆ ಎಂಬುದನ್ನು ಕಾದು ನೋಡ್ಬೇಕು.
ಇನ್ನು ಇನ್ಸ್ಟಾಗ್ರಾಂ ಪೋಸ್ಟ್ಗೆ ವೀಕ್ಷಕರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಕಾವೇರಿ ಜೈಲು ಸೇರಿದ್ರೆ ಸೀರಿಯಲ್ ಮುಗಿಯುತ್ತೆ. ಹೊಸ ಧಾರಾವಾಹಿ ʼಲಕ್ಷ್ಮೀ ಬಾರಮ್ಮʼ ಮುಗಿಸ್ತಿದ್ದಾರೆ ಎಂದು ವೀಕ್ಷಕರು ಮಾತನಾಡಿಕೊಳ್ತಿದ್ದಾರೆ. ಬಹುತೇಕ ವೀಕ್ಷಕರಿಗೆ ವೈಷ್ಣವ್ ವರ್ತನೆ ಇಷ್ಟವಾಗಿಲ್ಲ. ಇಷ್ಟಾದ್ರೂ ವೈಷ್ಣವ್ ಅಮ್ಮನನ್ನು ಮೂರ್ಖನಂತೆ ನಂಬ್ತಿದ್ದಾನೆ ಎಂಬುದೇ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ವೈಷ್ಣವ್ ಮೆಮೊರಿ ಕಾರ್ಡ್ ಕಳೆದಿದೆ. ಒಂದು ಸಲ ಕೀರ್ತಿ ಪರ, ಇನ್ನೊಂದು ಸಲ ಅಮ್ಮನ ಪರ ನಿಂತ ವೈಷ್ಣವ್, ಈಗ ಮಹಾಲಕ್ಷ್ಮೀ ಪರ ನಿಲ್ತಾನಾ ನೋಡ್ಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ವೈಷ್ಣವ್ಗೆ ಸ್ವಂತ ಬುದ್ದಿ ಇಲ್ಲ, ಹಿತ್ತಾಲೆ ಕಿವಿಯಂತೆ ಮಗನನ್ನು ಬೆಳೆಸಿದ್ದಾಳೆ ಕಾವೇರಿ ಅಂತ ವೈಷ್ಣವ್ ತರಾಟೆಗೆ ತೆಗೆದುಕೊಂಡಿದ್ದಾರೆ ವೀಕ್ಷಕರು.
ಈ ಸುದ್ದಿಯನ್ನೂ ಓದಿ: Pushpa 2 The Rule review: ಪುಷ್ಪಾ-2 ಹೇಗಿದೆ?, 3 ಗಂಟೆ 20 ನಿಮಿಷದ ಸಿನಿಮಾ ಬೋರ್ ಆಗುತ್ತಾ?