Tuesday, 10th December 2024

BBK 11 Fight: ಜಗದೀಶ್-ರಂಜಿತ್ ಮಧ್ಯೆ ನಡೆದ ಹೊಡೆದಾಟ ಇದುವೆ?: ವೈರಲ್ ಆಗುತ್ತಿದೆ ವಿಡಿಯೋ

Jagadish Ranjith Fight

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾದಾಗಿನಿಂದ ಹೆಚ್ಚು ಜಗಳಗಳಿಂದಲೇ ಸುದ್ದಿಯಲ್ಲಿತ್ತು. ಆದರೆ, ಈಗ ಇದು ಮುಂದಿನ ಹಂತಕ್ಕೆ ಹೋಗಿದ್ದು, ಮನೆಯೊಳಗೆ ಹೊಡೆದಾಟ ಆಗಿದೆ ಎಂದು ಹೇಳಲಾಗುತ್ತಿದೆ. ಜಗದೀಶ್ ಮತ್ತು ರಂಜಿತ್ ನಡುವೆ ಹೊಡೆದಾಟ ನಡೆದಿದ್ದು, ಇವರಿಬ್ಬರನ್ನೂ ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆಂತೆ. ನಿನ್ನೆ (ಅ. 16) ಎಪಿಸೋಡ್​​ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಜಗದೀಶ್ ಹಾಗೂ ಮಂಜು ಜಗಳ ಆಡುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಬಂದ ರಂಜಿತ್, ಜಗದೀಶ್​ ಅವರನ್ನು ತಳ್ಳಿದ್ದಾರೆ. ಆಗ ಜಗದೀಶ್​ ರಂಜಿತ್​ ಅವರನ್ನು ಗುರಾಯಿಸಿದ್ದಾರೆ. ತಕ್ಷಣ ಮೋಕ್ಷಿತಾ ಅವರು ರಂಜಿತ್​ನನ್ನು ಎಳೆದುಕೊಂಡು ಹೋಗಿದ್ದಾರೆ. ನಂತರ ಬಿಗ್​ಬಾಸ್​ ಮನೆಯಲ್ಲಿ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ಜಗದೀಶ್‌ ಆರಂಭದಿಂದ ಕೇವಲ ಮನೆಯ ಸ್ಪರ್ಧಿಗಳ ವಿರುದ್ಧ ಮಾತ್ರವಲ್ಲದೆ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಕೂಡ ಹಗುರವಾಗಿ ಮಾತನಾಡಿದ್ದರು. ಅದರಲ್ಲೂ ನಿನ್ನೆ ಬಿಗ್ ಬಾಸ್ ಶೋ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ. ಆದರೆ, ಅವರು ಆಡಿರುವ ಎಲ್ಲ ಮಾತುಗಳು ಏನು ಎಂಬುದು ತಿಳಿದುಬಂದಿಲ್ಲ, ಕೆಲವೊಂದು ಮಾತು ಟೆಲಿಕಾಸ್ಟ್ ಆಗಿದ್ದರೂ ಅದಕ್ಕೆ ಬೀಪ್ ಸೌಂಡ್ ಹಾಕಲಾಗಿದೆ. ಇದಕ್ಕೆ ಇಡೀ ಮನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇಲ್ಲಿಂದ ಶುರುವಾದ ಜಗಳ ಇನ್ನೂ ನಿಂತಿಲ್ಲ.

ಮಾನಸ ಆಡಿದ ಮಾತಿನಿಂದಲೇ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ನಡೆದಿದೆ ಎಂಬ ಸುದ್ದಿ ಕೂಡ ಇದೆ. ನಾಮಿನೇಷನ್ ವೇಳೆ ಜಗದೀಶ್ ಎಲ್ಲರ ವಿಚಾರಕ್ಕೂ ಮೂಗು ತೂರಿಸಿದ್ದರಂತೆ. ಇದನ್ನು ಮಾನಸ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಗದೀಶ್ ಸಿಟ್ಟಾಗಿ ರೇಗಾಡಿದ್ದಾರೆ. ಆಗ​ ರಂಜಿತ್ ಹಾಗೂ ಮಂಜುಗೂ ಜೋರಾಗಿ ಜಗಳವಾಡಿದ್ದು, ಅವಾಚ್ಯ ಶಬ್ಧಗಳಿಂದ ಬೈಯ್ದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಳೇ ಕಾಣುತ್ತಿಲ್ಲ: ಬರೀ ಜಗಳ… ಜಗಳ… ಜಗಳ…