Tuesday, 10th December 2024

Lawyer Jagadish : ಮಧ್ಯರಾತ್ರಿಯಲ್ಲಿ ಬೀದಿಗಿಳಿದು ಹೋರಾಟ ಶುರು ಮಾಡಿದ ಲಾಯರ್ ಜಗದೀಶ್‌!

Lawyer Jagadish

ಬೆಂಗಳೂರು : ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ (Lawyer Jagadish) ಅವರ ಸಾಮಾಜಿಕ ಹೋರಾಟ ಮುಂದುವರಿದಿದೆ. ಬಿಗ್‌ಬಾಸ್ ಮನೆಯಲ್ಲಿ ಅಬ್ಬರದ ಹೋರಾಟ ಮಾಡಿ ಅದೇ ಕಾರಣಕ್ಕೆ ಹೊರಕ್ಕೆ ಬರುವಂತಾದ ಲಾಯರ್‌ ಜಗದೀಶ್ ಇದೀಗ ಹೊರಗಡೆಯೂ ತಮ್ಮಅಭಿಯಾನ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ಅಂತೆಯೇ ಬಿಡಿಎಯಿಂದ ಮಾನ್ಯತೆ ಪಡೆದಿರುವ ಟಾಟಾ ನಗರ ಲೇಔಟ್‌ನಲ್ಲಿಯೂ ನೀರು ನಿಂತು ಸಮಸ್ಯೆ ಆಗುತ್ತಿದೆ. ಈ ಪರಿಸ್ಥಿತಿಯ ಬಗ್ಗೆ ಅವರು ವಿಡಿಯೊ ಮಾಡಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಟಾ ನಗರದಲ್ಲಿ ವಿಜ್ಞಾನಿಗಳೇ ಹೆಚ್ಚಿದ್ದಾರೆ. ಈ ಪ್ರದೇಶದಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ವಾಹನಗಳು ಕೂಡ ಮುಳುಗುವ ಸ್ಥಿತಿ ತಲುಪಿತ್ತು. ಈ ಎಲ್ಲ ಪರಿಸ್ಥಿತಿಗಳನ್ನು ಲಾಯರ್ ಜಗದೀಶ್ ಅವರು ವಿಡಿಯೊ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸದ ಅಧಿಕಾರಿಗಳ ಬಗ್ಗೆ ಕಿಡಿ ಕಾರಿದ್ದಾರೆ. ಭ್ರಷ್ಟ ಅಧಿಕಾರಿಗಳಿಂದ ಸಮಸ್ಯೆ ಶುರುವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ಪರ್ಧಿಗಳ ವಿರುದ್ಧ ಕಿಡಿಕಾರಿದ ಜಗದೀಶ್‌

ಲಾಯರ್ ಜಗದೀಶ್ ಬಿಗ್‌ಬಾಸ್‌ ಮನೆಯಲ್ಲಿರುವ ಕೆಲ ಸ್ಪರ್ಧಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇರುವ ಕೆಲ ಸ್ಪರ್ಧಿಗಳು ಕಪಟಿಗಳು. ಅವರ ನಿಜವಾದ ಮುಖ ಬಯಲು ಮಾಡಬೇಕಿದೆ. ಅದನ್ನು ನಾನು ಮಾಡುತ್ತೇನೆ ಎಂದು ಜಗದೀಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ನಿಮಗೆ ತುಂಬಾ ಹತ್ತಿರವಾದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಜಗದೀಶ್ ಐಶು ಎಂದು ಹೇಳಿದ್ದಾರೆ. ಅವರು ದಿನಾ ಡ್ಯಾನ್ಸ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

‘ಮೆಟ್ಟು ತಗೊಂಡು ಹೊಡಿತೀನಿ’: ಸುದೀಪ್ ಮಾತಿಗೆ ಚೈತ್ರಾ ಕುಂದಾಪುರ

ಕಳೆದ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಶನಿವಾರ ಮತ್ತು ಭಾನುವಾರ ಎರಡು ದಿನ ಕೂಡ ನಡೆಯಿತು. ಅಷ್ಟು ಹೊತ್ತು ಸುದೀಪ್ ಅವರು ಸ್ಪರ್ಧಿಗಳ ಬೆಂಡೆತ್ತಿದರು. ನಾನು ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್​ನಲ್ಲಿ ಇದು ವರ್ಸ್ಟ್​ ಬ್ಯಾಚ್ ಎಂದು ಹೇಳಿದರು. ನಿಮ್ಮ ತಪ್ಪನ್ನು ನಾನು ಸರಿ ಪಡಿಸದಿದ್ದರೆ ಅದು ನನ್ನ ಕೆಲಸಕ್ಕೆ ನಾನು ಕೊಡುವ ಗೌರವ ಅಲ್ಲ ಎಂದು ಹೇಳಿ ಪ್ರತೀ ಸ್ಪರ್ಧಿಯ ತಪ್ಪುಗಳನ್ನು ಅರಿವು ಮಾಡುವ ಪ್ರಯತ್ನ ನಡೆಸಿದರು.

ಇದನ್ನೂ ಓದಿ: BBK 11: ಜಗದೀಶ್ ಹೋದರೂ ಬಿಗ್ ಬಾಸ್​ನಲ್ಲಿ ನಿಂತಿಲ್ಲ ಜಗಳ: ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮಾರಾಮಾರಿ

ಕಳೆದ ವಾರ ಸ್ಪರ್ಧಿಗಳು ನಡೆದುಕೊಂಡ ರೀತಿ, ಆಡಿದ ಮಾತನ್ನು ಅವರಿಗೇ ಮನವರಿಕೆ ಮಾಡಿದ ಸುದೀಪ್ ಬದಲಾಗಿ ಎಂದು ಹೇಳಿದ್ದರು. ಆದರೆ, ಈ ವಾರ ಸ್ಪರ್ಧಿಗಳು ಅದೇ ಹಳೇಯ ಚಾಳಿ ಮುಂದುವರೆಸಿದ್ದಾರೆ. ಸುದೀಪ್ ಆಡಿದ ಮಾತು ಲೆಕ್ಕಕ್ಕೆ ಇಲ್ಲದಂತಾಗಿದೆ. ಅದರಲ್ಲೂ ವೀಕೆಂಡ್ ಸುದೀಪ್ ಅವರು ಚೈತ್ರಾ ಕುಂದಾಪುರ ಅವರಿಗೆ ಸ್ಪೆಷನ್ ಕ್ಲಾಸ್ ತೆಗೆದುಕೊಂಡಿದ್ದರು. ಮಾತಿನ ಮೇಲೆ ಹಿಡಿತ ಇರಬೇಕು ಎಂದಿದ್ದರು. ಆದರೀಗ ಚೈತ್ರಾ ಮೆಟ್ಟು ತಗೊಂಡು ಹೊಡಿತೀನಿ ಎಂಬ ಪದ ಬಳಸಿ ನಾಲಿಗೆ ಹರಿಬಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಬೆಡ್‌ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ಮಾತಿನ ಮಧ್ಯೆ ಚೈತ್ರಾ, “ಮೆಟ್ಟು ತಗೊಂಡು ಹೊಡಿತೀನಿ ನಾನು. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ” ಎಂದು ಖಾರವಾಗಿ ಹೇಳಿದ್ದಾರೆ.