Saturday, 14th December 2024

BBK 11: ಜಗದೀಶ್ ಸುದ್ದಿಗೋಷ್ಠಿ: ಮನೆಯೊಳಗಡೆ ಹೇಳಿದಂತೆ ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡ್ತಾರಾ?

Lawyer Jagadish Press conference

ಬಿಗ್ ಬಾಸ್ ಕನ್ನಡ (Bigg Boss Kannada) ರಿಯಾಲಿಟಿ ಶೋನಲ್ಲಿ ಏನು ನಡೆಯಬಾರದಿತ್ತೊ ಅದು ನಡೆದು ಹೋಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಜಗದೀಶ್ ಹಾಗೂ ಇವರನ್ನು ತಳ್ಳಿದ್ದಕ್ಕಾಗಿ ರಂಜಿತ್ ಅವರನ್ನು ಮನೆಯಿಂದ ಹೊರಹಾಕಲಾಗಿದೆ. ಶೋ ಆರಂಭವಾದಾಗಿನಿಂದಲೂ ಜಗದೀಶ್ ಅವರು ಎಲ್ಲ ಮನೆ ಮಂದಿಯ ಜೊತೆ ಜಗಳ ಆಡಿದ್ದರು. ಮೊದಲ ವಾರ ಬರೀ ಜಗಳ ಆಡಿದ್ದ ಜಗದೀಶ್, ಎರಡನೇ ವಾರ ಕೊಂಚ ರೊಮ್ಯಾಂಟಿಕ್ ಹೀರೋ ಆದರು. ಆಮೇಲೆ ಮೂರನೇ ವಾರ ಮತ್ತೆ ಜಗಳ ಶುರು ಮಾಡಿದ್ದರು.

ಇದೀಗ ಜಗಳ ಅತಿರೇಕಕ್ಕೆ ಹೋಗಿ, ಮಾತಿನ ಹಿಡಿತ ಕಳೆದುಕೊಂಡು ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಭಾನುವಾರ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದಾರೆ. ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ಮನೆಯ ಒಳಗೆ ಇದ್ದಾಗ ಜಗದೀಶ್ ಅವರು ‘ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ’ ಎಂದು ಹೇಳಿದ್ದರು.

ಏನು ಹೇಳಿದ್ದರು ಜಗದೀಶ್?:

‘ನಾನು ಆಚೆ ಹೋದ ನಂತ್ರ ಈ ಬಾಗ್ ಬಾಸ್ ಅನ್ನು ಮಾನ್ಯುಪ್ಯುಲೆಟ್ ಮಾಡಿಲ್ಲ ನನ್ನ ಹೆಸರು ಜಗದೀಶ್ ಅಲ್ಲ. ಬಿಗ್ ಬಾಸ್ ನಾನು ನಿಮ್ಮ ಬಗ್ಗೆ ಎಲ್ಲ ಮಾಹಿತಿ ಹೊರಹಾಕ್ತೇನೆ. ಪ್ರೊಗ್ರಾಂ ನಡೆಸ್ಬೇಕಲ್ಲ ಕೌಂಟ್ ಇಟ್. ನಾನು ಬಿಗ್ ಬಾಸ್ ಏನು ಅಂತ ಆಚೆಕಡೆ ತೋರಿಸ್ತೇನೆ. ನಿಮ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ. ನಾನು ಈ ಪ್ರೊಗ್ರಾಂ ಅನ್ನು ಡೆಸ್ಟ್ರಾಯ್ ಮಾಡ್ತೇನೆ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಹೇಳಿದ್ದರು.

ಈ ಮಾತುಗಳನ್ನೆಲ್ಲ ಆಡಿದ ಬಳಿಕ ಜಗದೀಶ್ ಅವರು ಮನೆಯಲ್ಲಿ ಕ್ಷಮೆ ಕೇಳಿದ್ದರಾದರೂ, ಇದೀಗ ಮನೆಯಿಂದ ಹೊರಬಂದಿರುವ ಕಾರಣ  ಜಗದೀಶ್ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಜಕ್ಕೂರು ಏರೋಡ್ರೋಮ್ ಪ್ರವೇಶದ್ವಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ ಎಂದು ಜಗದೀಶ್ ಹೇಳಿದ್ದಾರೆ.

BBK 11: ರಂಜಿತ್​ನ ಕಳುಹಿಸಬೇಡಿ ಎಂದು ಬಿಗ್ ಬಾಸ್ ಬಳಿ ಅಂಗಲಾಚಿದ ಸ್ಪರ್ಧಿಗಳು