Wednesday, 11th December 2024

ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗದೀಶ್: ಮಹಿಳೆಯರ ಒಳ ಉಡುಪಿನ ಬಗ್ಗೆ ಕೀಳು ಮಾತು

Jagadish and Bhavya

ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಈಗ ಬರೀ ಲಾಯರ್ ಜಗದೀಶ್ (Lawyer Jagadish) ಅವರದ್ದೇ ಮಾತು. ಅನಗತ್ಯವಾಗಿ ಸ್ಪರ್ಧಿಗಳನ್ನು ಪದೇ ಪದೇ ಕೆಣಕಿ ಜಗಳಕ್ಕೆ ಬರುತ್ತಿದ್ದಾರೆ. ಜಗದೀಶ್ ಅವರ ಮಾತು ಕೂಡ ಮಿತಿ ಮೀರಿದೆ. ಬಿಗ್ ಬಾಸ್​ಗೆನೇ ಧಮ್ಕಿ ಹಾಕಿ ಕ್ಷಮೆ ಕೇಳಿದ್ದ ಇವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲ ಹೆಣ್ಣು ಮಕ್ಕಳು ಇವರ ವಿರುದ್ಧ ಸಿಟ್ಟಾಗಿದ್ದಾರೆ.

ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತು:

ಕ್ಯಾಪ್ಟನ್ಸಿ ಟಾಸ್ಕ್ ಆಡಲು ಬಿಗ್ ಬಾಸ್ 6 ಸ್ವರ್ಗ ವಾಸಿಗಳಿಗೆ ಮಾತ್ರ ಅವಕಾಶ ನೀಡಿದ್ದರು. ನಿಮ್ಮೊಳಗೆ ಚರ್ಚಿಸಿ ಆರು ಮಂದಿಯನ್ನು ಆಯ್ಕೆ ಮಾಡಿ ಎಂದಿದ್ದರು. ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದರು. ಆದರೆ, ಇದು ಜಗದೀಶ್ ಅವರ ಕೋಪಕ್ಕೆ ಕಾರಣ ಆಯಿತು. ಈ ವಿಚಾರಕ್ಕೆ ಮನೆ ಮತ್ತೊಮ್ಮೆ ರಣರಂಗವಾಯಿತು. ನೇರವಾಗಿ ಸ್ಪರ್ಧಿಗಳ ವಿರುದ್ಧ ಹರಿಹಾಯ್ದರು.

ಅದರಲ್ಲೂ ಉಗ್ರಂ ಮಂಜು ವಿರುದ್ಧ ಜಗದೀಶ್ ಮನಬಂದಂತೆ ಮಾತನಾಡಿದರು. ‘ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ. ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ. ಗ್ಯಾಂಗ್ ಕಟ್ಟಿದ್ಯಾ? ನಾನು ಕೂಡ ಪ್ಲೇಯರ್, ಈ ಚೆಲ್ಲಾಟ ಬೇಡ, ಆಟ ನನಗೂ ಆಡಲು ಬರುತ್ತೆ. ಚೆಕ್ ಮೇಟ್ ಆಡ್ತೀನಿ. ನಿನಗೆ ಬುದ್ದಿ ಕಲಿಸದಿದ್ರೇ, ನಾನು ನಮ್ಮ ಅಪ್ಪನ ಮಗನೇ ಅಲ್ಲ, ನಾನು ಲಾಯರ್​​ ಜಗದೀಶ್ ಅಲ್ವೇ ಅಲ್ಲ. ನಿನ್ನ ಲ್ಯಾಗ್ವೆಜ್​ ನಲ್ಲೇ ನಿನಗೆ ವಾಪಸ್​ ಕೊಡ್ತಿನಿ’ ಎಂದು ಜಗದೀಶ್​ ಕೂಗಾಡಿದ್ದಾರೆ.

ಇದಕ್ಕೆಲ್ಲ ಕ್ಯಾರೇ ಎನ್ನದ ಮಂಜು ಹೆಚ್ಚಿನ ಉತ್ತರ ಕೊಡೋಕೆ ಹೋಗಿಲ್ಲ. ‘ಬ್ರೋ..’ ‘ಬ್ರೋ..’ ಎಂದಷ್ಟೇ ಹೇಳಿದರು. ಆಗ ಜಗದೀಶ್ ಅವರು ‘ಬ್ರೋ ಪ್ಯಾಂಟೀಸ್ ಎಲ್ಲ ನೋಡಿದೀನಿ. ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಹೆಣ್ಮುಕ್ಕಳಿಗೆ ಲಾಯರ್ ಜಗದೀಶ್ ಮಾತಿನಿಂದ ಮುಜುಗರವಾಗಿದೆ. ‘ನಿಜವಗಾಲೂ ಇನ್​ಸೆಕ್ಯೂರ್ ಫೀಲ್ ಆಗ್ತಿದೆ. ಹುಡುಗಿಯರ ವೈಯಕ್ತಿಕ ವಿಚಾರಕ್ಕೆ ಬರುತ್ತಿದ್ದಾರೆ. ನೀವು ಏನಾದರೂ ನಿರ್ಧಾರ ತೆಗೆದುಕೊಳ್ಳಿ ಬಿಗ್ ಬಾಸ್’ ಎಂದು ಭವ್ಯಾ ಗೌಡ ಮನವಿ ಮಾಡಿದ್ದಾರೆ.

BBK 11 Captain: ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಈ ಮಹಿಳಾ ಸ್ಪರ್ಧಿ ಆಯ್ಕೆ