Sunday, 6th October 2024

ಹಾಡಿನಲ್ಲೇ ಸದ್ದು ಮಾಡುತ್ತಿದೆ ರಚ್ಚು ಐ ಲವ್‌ ಯು

ಅಜಯ್ ರಾವ್ ಹಾಗೂ ರಚಿತಾ ರಾವ್ ಇದೇ ಮೊದಲ ಬಾರಿಗೆ ಒಟ್ಟಾಗಿ ನಟಿಸಿ ರುವ ರಚ್ಚು ಐ ಲವ್ ಯು ಚಿತ್ರ, ಹಾಡುಗಳ ಮೂಲಕವೇ ಸಖತ್ ಸದ್ಧು ಮಾಡುತ್ತಿದೆ.

ಮುದ್ಧು ನೀನೆ ಹಾಡಿನ ಮೂಲಕ ಸಿನಿಪ್ರಿಯರನ್ನು ಸೆಳೆದಿದ್ದ ರಚ್ಚು , ಅದರಲ್ಲಿ ಹಾಟ್ ಲುಕ್‌ನಲ್ಲಿ ಕಂಗೊಳಿಸಿದ್ದರು. ಫಸ್ಟ್ ನೈಟ್ ಬಗ್ಗೆಯೂ ಬೋಲ್ಡ್ ಆಗಿ ಮಾತನಾಡಿದ್ದ ರಚಿತಾ, ಚಿತ್ರದ ಬಗ್ಗೆ ಕಾತರತೆ ಹೆಚ್ಚುವಂತೆ ಮಾಡಿದ್ದರು. ಈಗ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಲವ್ ಯು.. ಲವ್ ಯು ರಚ್ಚಿ… ಎಂಬ ಹಾಡು ಇದಾಗಿದ್ದು, ಕೇಳಲು ಮಧುರವಾಗಿದೆ.

ಭರ್ಜರಿ ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ನವೀನ್ ಸಜ್ಜು ದನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿ ದ್ದಾರೆ. ನಾಯಕ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಹಾಡು ಇದಾಗಿದ್ದು, ಇಲ್ಲಿಯೂ ರಚ್ಚು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಲಿರಿಕಲ್ ಹಾಡಷ್ಟೇ ಬಿಡುಗಡೆಯಾಗಿದೆ.

ಚಿತ್ರದ ಶೀರ್ಷಿಕೆಯೇ ಹೇಳಿದಂತೆ ನವಿರಾಧ ಪ್ರೇಮ ಕಥೆಯ ಸಿನಿಮಾ ಇದಾಗಿದ್ದು, ಜತೆಗೆ ಸೆಂಟಿಮೆಂಟ್ ಅಂಶಗಳು ಕೂಡ ಚಿತ್ರದಲ್ಲಿವೆ. ಅಚ್ಯುತ್ ಕುಮಾರ್, ಬಿ.ಸುರೇಶ್, ರಾಘು ಶಿವಮೊಗ್ಗ ಸೇರಿದಂತೆ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಶಂಕರ್ ರಾಜ್
ನಿರ್ದೇಶನದಲ್ಲಿ ಚಿತ್ರದ ಸಿದ್ಧವಾಗಿದ್ದು, ಶಶಾಂಕ್ ಚಿತ್ರದ ಕಥೆ ರಚಿಸಿ, ಸಂಭಾಷಣೆ ಬರೆದಿದ್ದಾರೆ. ನೃತ್ಯ ನಿರ್ದೇಶನ ಅಜಯ್
ರಾವ್, ಸಾಹಸ ನಿರ್ದೇಶನ ವಿಕ್ರಂ ಮೋರ್, ವಿನೋದ್, ಅರ್ಜುನ್ ರಾಜ್ ಅವರದ್ದಾಗಿದೆ.