Friday, 13th December 2024

ವಿಮಾನದಲ್ಲಿ ಲಗೇಜ್‌ ನಾಪತ್ತೆ: ನಟ ದಗ್ಗುಬಾಟಿ ಅಸಮಾಧಾನ

ವದೆಹಲಿ: ನಟ ರಾಣಾ ದಗ್ಗುಬಾಟಿ ಇಂಡಿಗೋದಿಂದ ಅನುಭವಿಸಿದ ಕೆಟ್ಟ ಅನುಭವ ಟ್ವೀಟ್‌ ಮಾಡುವ ಮೂಲಕ ಹೊರ ಹಾಕಿದ್ದಾರೆ.

ವಿಮಾನದಲ್ಲಿ ದಗ್ಗುಬಾಟಿ ಲಗೇಜ್‌ ನಾಪತ್ತೆಯಾಗಿದ್ದು, ಇದೊಂದು ‘ಕೆಟ್ಟ ವಿಮಾನ ಯಾನ ಅನುಭವ’ ಎಂದು ಟೀಕಿಸಿದ್ದಾರೆ.

ಇನ್ನೂ ಲಗೇಜ್ ಟ್ರ್ಯಾಕಿಂಗ್ ಬಗ್ಗೆ ಸಿಬ್ಬಂದಿ ಯಾವುದೇ ಸುಳಿವು ನೀಡಿಲ್ಲ ಎಂದು ಹೇಳಿದ್ದಾರೆ.

‘ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇದು!! ವಿಮಾನ ಹಾರಾಟದ ಸಮಯ ಗಳ ಬಗ್ಗೆ ಸುಳಿವು ಇಲ್ಲ. ನನ್ನ ಲಗೇಜ್ ಕಾಣೆಯಾಗಿದೆ. ಈ ಬಗ್ಗೆ ಸಿಬ್ಬಂದಿ ಯಾವುದೇ ಸುಳಿವು ನೀಡಿಲ್ಲ’ ಎಂದಿದ್ದು, ಅವರು ವಿಮಾನಯಾನ ಲೋಗೋದ GIF ಅನ್ನು ಹಂಚಿ ಕೊಂಡಿದ್ದಾರೆ ಮತ್ತು ಟ್ವೀಟ್‌ನಲ್ಲಿ ಕಂಪನಿಯನ್ನು ಟ್ಯಾಗ್ ಮಾಡಿದ್ದಾರೆ.

ದಗ್ಗುಬಾಟಿ ಅವರ ಟ್ವೀಟ್‌ಗೆ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದ್ದು, ಲಗೇಜ್ ಕಾಣೆ ಯಾದ ಬಗ್ಗೆ ಕ್ಷಮೆಯಾಚಿಸಿದೆ.

‘ಈ ಮಧ್ಯೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ದಯವಿಟ್ಟು ಖಚಿತವಾಗಿರಿ, ನಿಮ್ಮ ಲಗೇಜ್ ಅನ್ನು ನಿಮಗೆ ಬೇಗನೆ ತಲುಪಿಸಲು ನಮ್ಮ ತಂಡವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದೆ.