Saturday, 5th October 2024

ಲೂಸಿಯಾ ನಟಿ ಶ್ರುತಿ ಹರಿಹರನ್’ಗೆ ಹುಟ್ಟುಹಬ್ಬದ ಸಂಭ್ರಮ

ತಿರುವನಂತಪುರಂ: ಕನ್ನಡ ಚಿತ್ರರಂಗದ ಲೂಸಿಯಾದಲ್ಲಿ ನಟಿಸಿರುವ ನಟಿ ಶ್ರುತಿ ಹರಿಹರನ್ 32ನೇ ಹುಟ್ಟುಹಬ್ಬದ ಸಂಭ್ರಮ ದಲ್ಲಿದ್ದಾರೆ.

ನಟಿ ಶ್ರುತಿ 2012ರಂದು ‘ಸಿನಿಮಾ ಕಂಪನಿ’ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. 2013ರಂದು ‘ಲೂಸಿಯಾ’ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು.

 

ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶ್ರುತಿ ನಾಯಕಿಯಾಗಿ ಅಭಿನಯಿಸಿದರು. ನಟಿ ಶ್ರುತಿ ಹರಿಹರನ್ 1989 ಫೆಬ್ರವರಿ 2ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮ ದಲ್ಲಿದ್ದಾರೆ.

2016 ರಲ್ಲಿ ವಿಸ್ಮಯ ಚಿತ್ರದ ಶೂಟಿಂಗ್‌ ವೇಳೆ ನಟ ಅರ್ಜುನ್ ಸರ್ಜಾ ಅವರಿಂದ ಮಾನಸಿಕ ಶೋಷಣೆಗೆ ಒಳಗಾಗಿದ್ದರು ಎಂದು ಮಿಟೂ ಆಂದೋಲನದಲ್ಲಿ ಹೇಳಿ ವಿವಾದದ ಕೇಂದ್ರ ಬಿಂದುವಾಗಿದ್ದರು.