Wednesday, 11th December 2024

ಬಿಜೆಪಿಗೆ ನಟಿ ಮಹಿ ಗಿಲ್​​ ಸೇರ್ಪಡೆ ?

ಚಂಡೀಗಢ: ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸೋಮವಾರ ತನ್ನ ಪಕ್ಷಕ್ಕೆ ನಟಿ ಮಹಿ ಗಿಲ್​​ರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ನಟಿ ಮಹಿ ಗಿಲ್​ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ವಾರ್ಡ್ ಸಂಖ್ಯೆ 2ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಹರ್ಮೋಹಿಂದರ್​ ಸಿಂಗ್​ ಲಕ್ಕಿ ಅವರ ಪರ ಪ್ರಚಾರ ಮಾಡಿದ್ದರು. ಮಹಿ ಗಿಲ್​ ತನ್ನ ಬಾಲ್ಯದ ಗೆಳತಿ ಎಂದು ಹೇಳಿದ್ದರು. ಮಹಿ ಗಿಲ್​​ ನನಗೆ ರಾಜಕೀಯ ಸೇರುವ ಯಾವುದೇ ಉದ್ದೇಶವಿಲ್ಲ. ಭವಿಷ್ಯದಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು.

ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಹರ್ದೀಪ್​ ಸಿಂಗ್​ ಪುರಿ ಪಂಜಾಬ್​ನಲ್ಲಿ ಬಿಜೆಪಿ ಹಾಗೂ ಶಿರೋಮಣಿ ಅಕಾಲಿ ದಳದ ನಡುವಿನ ಚುನಾವಣೋ ತ್ತರ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಎರಡು ಪಕ್ಷದ ನಡುವಿನ ಮೈತ್ರಿಯು ಒಂದು ಕೆಟ್ಟ ದಾಂಪತ್ಯ ಎಂದು ಜರಿದಿದ್ದರು.