Monday, 11th November 2024

ಮಲೆ ಮಹದೇಶ್ವರನ ದರ್ಶನ ಪಡೆದ ಗಾಯಕಿ ಪ್ರಿಯದರ್ಶಿನಿ, ಸಂಗೀತ ನಿರ್ದೇಶಕ ಮಹೇಶ್ ಮಹದೇವ್

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಅಕ್ಟೋಬರ್ 4ರಂದು ಬಹುಭಾಷಾ ಹಿನ್ನೆಲೆಗಾಯಕಿ ಡಾ. ಪ್ರಿಯದರ್ಶಿನಿ ಹಾಗೂ ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಭೇಟಿ ನೀಡಿದರು.

ಚಿನ್ನದ ತೇರು, ಅಭಿಷೇಕ ಪೂಜೆ ನೆರೆವೇರಿಸಿ ದಾಸೋಹ ಭವನದಲ್ಲಿ ಅವರು ಪ್ರಸಾದ ಸೇವಿಸಿದರು.

ನಮ್ಮ ಮನೆ ದೇವರು ಮಹದೇಶ್ವರ, ನನ್ನ ಜೀವನದಲ್ಲಿ ಸಾಕಷ್ಟು ಪವಾಡಗಳು ನಡೆದಿದೆ. ನಾನಿಂದು ಬದುಕುಳಿ ದಿರುವುದೇ ಮಾದಪ್ಪನ ಪವಾಡದಿಂದ, ಈಗ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ ಇನ್ನು ಮುಂದೆ ವರ್ಷಕ್ಕೊಂದು ಮಹದೇಶ್ವರನ ಭಕ್ತಿ ಗೀತೆಯನ್ನು ನಮ್ಮ ಆಡಿಯೋ ಕಂಪನಿ ಪಿ ಎಂ ಆಡಿಯೋಸ್ ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಹೇಶ್ ಮಹದೇವ್ ತಿಳಿಸಿದರು.

‘ಹರಿಕೆ ತೀರಿಸುವ ಸಲುವಾಗಿ ಮಲೆ ಮಹದೇಶ್ವರನ ಕ್ಷೇತ್ರಕ್ಕೆ ಬಂದೆ’ ಚಲನಚಿತ್ರ ಸಂಗೀತದಲ್ಲಿ ಪಿಹೆಚ್ ಡಿ ಡಾಕ್ಟರೇಟ್ ಪಡೆದ ಮೇಲೆ ಇದೆ ಮೊದಲ ಬಾರಿಗೆ ಬೆಟ್ಟಕ್ಕೆ ಬಂದಿದ್ದೇನೆ ನಾನು ಬರೆದ ೧೦೮೦ ಪುಟದ ಮಹಾ ಪ್ರಬಂಧವನ್ನು ದೇವರಬಳಿ ಇಟ್ಟು ಪೂಜೆ ಸಲ್ಲಿಸಿದ್ದು ಮನಸ್ಸಿಗೆ ತುಂಬಾ ಸಂತೋಷವಾಗಿದೆ ಎಂದು ಗಾಯಕಿ ಪ್ರಿಯದರ್ಶಿನಿ ಹೇಳಿದರು.

ಸಹೋದರ ಸುನಿಲ್ ಮಹದೇವ್, ಮಂಜುನಾಥ್ ಇವರ ಸಾಥ್ ನೀಡಿದರು.