Friday, 13th December 2024

ನಟ ಮನೋಜ್ ಬಾಜಪೇಯಿ ತಂದೆ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ಬಾಲಿವುಡ್ ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್.ಕೆ.ಬಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ, ಮನೋಜ್ ತಂದೆಗೆ 83 ವರ್ಷ ವಯಸ್ಸಾಗಿದೆ. ಅನಾರೋಗ್ಯ ಸುದ್ದಿ ಕೇಳಿದ ನಂತರ, ಮನೋಜ್ ಕೇರಳದಿಂದ ದೆಹಲಿಗೆ ಧಾವಿಸಿದರು.

ಬಿಹಾರದಿಂದ ಬಂದ ಮನೋಜ್ ಬಾಜಪೇಯಿ, ಅಧ್ಯಯನಕ್ಕಾಗಿ ದೆಹಲಿಗೆ ತೆರಳಿದರು. ನಂತರ ಮುಂಬೈಗೆ ತೆರಳಿ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. ಕಮಲ್ ರಶೀದ್ ಖಾನ್ (ಕೆಆರ್‌ಕೆ) ವಿರುದ್ಧ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿ ಇವರು ಇತ್ತೀಚೆಗೆ ಸುದ್ದಿಯಾಗಿದ್ದರು.

ಇವರ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿ ಭಾರೀ ಯಶಸ್ಸು ಗಳಿಸಿದೆ.