Friday, 13th December 2024

ನಟ ಮಾಸ್ಟರ್ ಆನಂದ್ 39ನೇ ಹುಟ್ಟುಹಬ್ಬ

ಬೆಂಗಳೂರು: ಕನ್ನಡ ಚಲನಚಿತ್ರರಂಗದ ಉತ್ತಮ ಬಾಲ್ಯ ನಟ ವಿಷಯ ಕಿವಿಗೆ ಬಿದ್ದ ತಕ್ಷಣ ನೆನಪಾಗುವ ಕೆಲವೇ ಹೆಸರುಗಳಲ್ಲಿ ಮಾಸ್ಟರ್ ಆನಂದ್ ಅವರ ಹೆಸರೂ ಸಹ ಒಂದು.

ಮಾಸ್ಟರ್ ಆನಂದ್ 1984ರ ಜನವರಿ 4ರಂದು ವಿ ಹರಿಹರನ್ ಹಾಗೂ ಬಿ ಎಸ್ ಲತಾ ಎಂಬ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದರು. ಚಿಕ್ಕ ವಯಸ್ಸಿಗೆ ನಟನೆಯನ್ನು ಕರಗತ ಮಾಡಿ ಕೊಂಡಿದ್ದ ಮಾಸ್ಟರ್ ಆನಂದ್ ವಿಶೇಷವಾಗಿ ಕಾಮಿಡಿ ಎಂಟರ್‌ ಟೈನರ್ ಚಿತ್ರಗಳಲ್ಲಿ ಮಾಡುತ್ತಿದ್ದ ಅಭಿನಯ ಪ್ರೇಕ್ಷಕರಿಗೆ ಅಚ್ಚುಮೆಚ್ಚು.

ರವಿಚಂದ್ರನ್ ಅವರ ಕಿಂದರಿ ಜೋಗಿ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ನಂತರ ಯಶಸ್ವಿ ಬಾಲನಟನಾಗಿ, ನಟನಾಗಿ, ನಿರ್ದೇಶಕನಾಗಿ, ನಿರೂ ಪಕನಾಗಿ ಬೆಳೆದರು.

2010ರಲ್ಲಿ ಯಶಸ್ವಿನಿ ಎಂಬವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್ ಅವರಿಗೆ ವಂಶಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಅಪ್ಪನಂತೆ ಮಗಳೂ ಸಹ ಪುಟ್ಟ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಿ ಕಿರುತೆರೆಯಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾಳೆ.

ಇನ್ನು ಮಾಸ್ಟರ್ ಆನಂದ್ ಮದುವೆಯಾಗಿ, ತಂದೆಯಾದರೂ ಸಹ ಇನ್ನೂ ಮಾಸ್ಟರ್ ಆನಂದ್ ಎಂದೇ ಕರೆಯಲ್ಪಡುತ್ತಿದ್ದು, ಇದು ಅವರು ಬಾಲಕನಾಗಿದ್ದಾಗ ಮಾಡಿದ್ದ ಅತ್ಯದ್ಭುತ ನಟನೆಯ ಪ್ರಭಾವವಾಗಿದೆ.

Read E-Paper click here