Friday, 13th December 2024

BBK 11: ಬಾಯಲ್ಲಿ ಬಂತು ಅಕ್ಕ-ತಂಗಿ ವಿಚಾರ: ಬಿಗ್ ಬಾಸ್ ಮನೆಯಲ್ಲಿ ತಾರಕಕ್ಕೇರಿದ ತ್ರಿವಿಕ್ರಮ್-ಮೋಕ್ಷಿತಾ ಜಗಳ

Trivikram and Mokhitha

ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಕಳೆದೊಂದು ವಾರದಿಂದ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಪೈ ನಡುವೆ ಜಗಳ ನಡೆಯುತ್ತಲೇ ಇದೆ. ಕಳೆದ ಭಾನುವಾರ ಎಲಿಮಿನೇಷನ್​ನಿಂದ ಬಚಾವ್ ಆಗಿ ಬಂದ ಕೂಡಲೇ ತ್ರಿವಿಕ್ರಮ್ ಮೇಲೆ ರೇಗಾಡಿದ್ದರು. ತಿವಿಕ್ರಮ್​ಗೆ ಗೋಮುಖ ವ್ಯಾಘ್ರ ಎಂದು ಕರೆದಿದ್ದರು. ಇಷ್ಟು ದಿನ ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಿರುವುದನ್ನು ಕಂಡು ಸುದೀಪ್ ಕೂಡ ಇದನ್ನೆ ಮೈಂಟೇನ್ ಮಾಡಿ ಎಂದಿದ್ದರು. ಇದೀಗ ಮತ್ತೊಮ್ಮೆ ಇವರಿಬ್ಬರ ನಡುಬೆ ಬೆಂಕಿ ಹತ್ತಿಕೊಂಡಿದೆ.

ಸದ್ಯ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಜಗಳಕ್ಕೆ ಕಾರಣ ಬಿಗ್ ಬಾಸ್ ಮನೆಯೊಳಗೆ ಬಿಡುಗಡೆ ಮಾಡಿರುವ ಒಂದು ವಿಡಿಯೋ. ಬೆನ್ನ ಹಿಂದೆ ಮಾತನಾಡಿದವರ ವಿಡಿಯೋವನ್ನು ಎಲ್ಲರ ಎದುರು ಪ್ಲೇ ಮಾಡಲಾಗಿದೆ. ಮೋಕ್ಷಿತಾ ಬಗ್ಗೆ ತ್ರಿವಿಕ್ರಮ್ ಮಾತನಾಡಿರುವುದು ಬಹಿರಂಗ ಆಗಿದೆ. ಅದನ್ನು ನೋಡಿ ಮೋಕ್ಷಿತಾ ಅವರು ಕೆಂಡಾಮಂಡಲ ಆಗಿದ್ದಾರೆ. ಅದೇ ರೀತಿ ಬೇರೆಯವರ ಗುಸ ಗುಸು ಮಾತುಗಳು ಕೂಡ ಈಗ ಬಯಲಾಗಿವೆ.

ಮೊದಲಿಗೆ ಶಿಶಿರ್ ಅವರ ಬಳಿ ಐಶ್ವರ್ಯಾ ಅವರು ಭವ್ಯ ಬಗ್ಗೆ ಮಾತಾಡಿದ್ದಾರೆ. ಕಣ್ಣಿಗೆ ಕಾಣಿಸುತ್ತಾ ಇದೆ ಅವರ ಹೊಟ್ಟೆ ಕಿಚ್ಚು ಎಂದು ಐಶ್ವರ್ಯಾ ಹೇಳಿದ್ದು, ಬೆನ್ನ ಹಿಂದೆ ಮಾತನಾಡಿದ ಈ ವಿಡಿಯೋ ಮನೆಯಲ್ಲಿ ಹಲ್ ಚಲ್ ಎಬ್ಬಿಸಿದೆ. ಇದಾದ ಬಳಿಕ ತ್ರಿವಿಕ್ರಮ್ ಆಡಿರುವ ಮಾತುಗಳ ವಿಡಿಯೋ ಪ್ಲೇ ಆಗಿದೆ.

ಭವ್ಯ, ಮಾನಸಾ ಅವರ ಬಳಿ ತ್ರಿವಿಕ್ರಮ್‌ ಅವರು ‘ಉಗ್ರಂ ಮಂಜು ಅವರ ಟೀಮ್‌ನಲ್ಲಿ ಒಂದಕ್ಕಿ ಹೊಡೆದ್ರೆ 2 ಅಕ್ಕಿ ಫ್ರೀ. ಇನ್ನೊಂದು ಹಕ್ಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂದು ಗೇಲಿ ಮಾಡಿದ್ದಾರೆ. ಮೋಕ್ಷಿತಾ, ಗೌತಮಿ ಅವರನ್ನು ಹಕ್ಕಿ ಅಂದಿರುವ ತ್ರಿವಿಕ್ರಮ್‌ ಮಾತು ಬಿಗ್ ಬಾಸ್‌ ಮನೆಯಲ್ಲಿ ಹೊಸ ಕಿಚ್ಚು ಹಚ್ಚಿದೆ. ತ್ರಿವಿಕ್ರಮ್ ಮಾತು ಮೋಕ್ಷಿತಾ ಅವರ ಮನಸ್ಸಿಗೆ ಚುಚ್ಚಿದ್ದು ಉಗ್ರವಾತಾರ ತಾಳಿದ್ದಾರೆ.

‘ಅಕ್ಕ-ತಂಗಿ ಜೊತೆಯಲ್ಲಿ ಬೆಳೆದವರು ಹಕ್ಕಿ ಅಂತ ಮಾತಾಡ್ತಾರಾ? ಅವರ ತನ ಏನು ಎಂಬುದು ತೋರಿಸುತ್ತೆ. ಅವರಿಗೆ ಗೋಮುಖ ವ್ಯಾಘ್ರ ಅಂತ ನಾನು ಕರೆದಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ, ಅದೇ ಇದು’ ಎಂದು ಮೋಕ್ಷಿತಾ ಹೇಳಿದ್ದಾರೆ. ಅತ್ತ ತ್ರಿವಿಕ್ರಮ್ ಅವರು, ಎಲ್ಲೆಲ್ಲಿ ಬಿಟ್ಟೆ ಹುಳಾನಾ? ಗೋಮುಖವ್ಯಾಘ್ರಕ್ಕಿಂತ ದೊಡ್ಡದೇನಾದರೂ ಇದ್ರೆ ಕೊಡಕ್ಕಾ. ಇಷ್ಟು ದಿನ ಹಾಗೆ ಇರಲಿಲ್ಲ ಇನ್ನ ಮೇಲೆ ಹಾಗೇ ಇರ್ತೀನಿ ಎಂದು ಹೇಳಿದ್ದಾರೆ.

BBK 11: ಅನುಷಾ ರೈ ತಲೆಗೆ ಬಡಿದ ಚೈತ್ರಾ ಕುಂದಾಪುರ: ಬಿಗ್ ಬಾಸ್ ಮನೆ ಮತ್ತೆ ರಣರಂಗ