Tuesday, 10th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾಗೆ ಬಂತು ವಿಡಿಯೋ ಮೆಸೇಜ್: ಸ್ಪರ್ಧಿಗಳು ಶಾಕ್

Mokshitha Video Message

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ಐದು ವಾರಗಳಾಗಿವೆ. ಈ ಐದೂ ವಾರಗಳಲ್ಲಿ ಮನೆ ನಗು-ಅಳುವಿಗಿಂತ ಹೆಚ್ಚು ಜಗಳಗಳನ್ನೇ ಕಂಡಿದೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆದರೆ, ಈ ವಾರ ಸ್ಪರ್ಧಿಗಳು ಹೆಚ್ಚು ಎಮೋಷನಲ್ ಆಗಿದ್ದಾರೆ. ಇಷ್ಟು ದಿನ ಜೋರು ಗಲಾಟೆಯಿಂದ ಕೂಗಾಡುತ್ತಿದ್ದ ಸ್ಪರ್ಧಿಗಳು ಇದೀಗ ಕಣ್ಣೀರಿಡುತ್ತಿದ್ದಾರೆ. ತಮ್ಮ ಮನಸ್ಸಿನ ಭಾರವನ್ನು ಇಳಿಸಲು ಬಿಗ್ ಬಾಸ್ ಅವಕಾಶ ನೀಡಿದ್ದಾರೆ.

ಈ ವಾರದ ಆರಂಭದಲ್ಲಿ ಬಿಗ್​ ಬಾಸ್ ಸ್ಪರ್ಧಿಗಳನ್ನು ಕನ್ಫೆಷನ್ ರೂಮ್ ಒಳಗೆ ಬರಲು ಹೇಳಿ ತಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಹೇಳಿದ್ದಾರೆ. ಈ ಸಂದರ್ಭ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಉಗ್ರಂ ಮಂಜು, ಗೋಲ್ಡ್ ಸುರೇಶ್, ತ್ರಿವಿಕ್ರಮ್ ಮುಂತಾದವರು ಕಣ್ಣೀರು ಹಾಕಿದ್ದಾರೆ. ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಬಿಗ್ ಬಾಸ್ ಮತ್ತೊಂದು ಎಮೋಷನಲ್ ವಿಚಾರ ತಂದಿದ್ದಾರೆ. ಅದೆ ಮನೆಯವರಿಂದ ಪತ್ರದ ಮಾಹಿತಿ. ಬಿಗ್ ಬಾಸ್​ ಮನೆಮಂದಿಗೆ ದೀಪಾವಳಿ ಸರ್ಪೈಸ್​ ನೀಡುತ್ತಿದ್ದಾರೆ. ಮನೆಯೊಳಗೆ ಬಿಗ್​ ಬಾಸ್​ ಸಿಬ್ಬಂದಿಗಳು ಬರುತ್ತಾರೆ. ಅವರು ಸ್ಪರ್ಧಿಗಳ ಏಕಾಗ್ರತೆ ಬ್ರೇಕ್​ ಮಾಡುವ ಪ್ರಯತ್ನ ಮಾಡಿದ್ದಾರೆ. ಬಿಗ್ ಬಾಸ್​​ ಕೊಟ್ಟ ನಿರ್ದಿಷ್ಟ ಸಮಯದವರೆಗೆ ಸ್ಪರ್ಧಿಗಳು ರಿಯಾಕ್ಟ್​​ ಮಾಡದೇ ಸುಮ್ಮನಿದ್ದರೆ, ಓರ್ವರಿಗೆ ಮನೆಯಿಂದ ಪತ್ರ ಬರುತ್ತದೆ.

ಸದ್ಯ ಇದರಲ್ಲಿ ಜಯಶಾಲಿಯಾದ ಮೋಕ್ಷಿತಾ ಪೈ ಅವರಿಗೆ ಬಂಪರ್ ಹೊಡೆದಿದೆ. ಎಲ್ಲರಿಗೂ ಪತ್ರ ಬಂದರೆ ಇವರಿಗೆ ವಿಡಿಯೋ ಸಂದೇಶ ಬಂದಿದೆ. ಇದನ್ನು ಕಂಡು ಮೋಕ್ಷಿತಾ ಬಹಳ ಖುಷಿಯ ಜೊತೆಗೆ ಭಾವುಕರಾಗಿದ್ದಾರೆ. ತಮ್ಮ ಅಮ್ಮ ಅಪ್ಪ ಮತ್ತು ಸಹೋದರನ ನೋಡಿ ಮತ್ತಷ್ಟು ಖುಷಿ ಆಗಿದ್ದಾರೆ. ಮನೆಯ ಟಿವಿಯಲ್ಲಿ ಇವರನ್ನ ನೋಡಿ ಕಣ್ಣೀರೂ ಹಾಕಿದ್ದಾರೆ.

ಇಂದು ಮನೆಯೊಳಗೆ ಜೋಕರ್​ ಪ್ರವೇಶಿಸಿದ್ದು, ಸ್ಪರ್ಧಿಗಳನ್ನು ನಗಿಸಲು, ಅವರ ಏಕಾಗ್ರತೆ ಮುರಿಯಲು ಪ್ರಯತ್ನ ನಡೆದಿದೆ. ಆದರೆ ಮನೆಮಂದಿ ರಿಯಾಕ್ಟ್​​ ಮಾಡದೇ ಯಶಸ್ಸು ಕಾಣುತ್ತಿದ್ದಾರೆ. ಒಬ್ಬೊಬ್ಬರಾಗೇ ಮನೆಯಿಂದ ಬಂದ ಪತ್ರವನ್ನು ಓದುತ್ತಿದ್ದಾರೆ. ಶಿಶಿರ್ ಶಾಸ್ತ್ರೀ, ಧರ್ಮ ಕೀರ್ತಿರಾಜ್ ಕೂಡ ಕಣ್ಣೀರಿಟ್ಟಿದ್ದಾರೆ. ಬಂದು-ಬಳಗವಿಲ್ಲದ ಐಶ್ವರ್ಯ ಅವರಿಗೆ ಸ್ವತಃ ಬಿಗ್ ಬಾಸ್ ಅವರೇ ಪತ್ರ ಬರೆದು ಕಳುಹಿಸಿದ್ದಾರೆ.

BBK 11: ಹೊರ ಹೋದ ಬಳಿಕವೂ ನಿಮ್ಮ ಜೊತೆ ಮಾತಾಡಲ್ಲ: ಕೊನೆಯಾಯ್ತು ಐಶ್ವರ್ಯ-ಭವ್ಯಾ ಫ್ರೆಂಡ್​ಶಿಪ್