Tuesday, 12th November 2024

BBK 11: ಮದುವೆಯ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಮೋಕ್ಷಿತಾ ಪೈ

Mokshitha Pai Crying

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಐದನೇ ವಾರ ನಡೆಯುತ್ತಿದೆ. ಹಿಂದಿನ ನಾಲ್ಕೂ ವಾರಗಳಲ್ಲಿ ಮನೆ ನಗು-ಅಳುವಿಗಿಂತ ಹೆಚ್ಚು ಜಗಳಗಳನ್ನೇ ಕಂಡಿದೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆದರೆ, ಈ ವಾರ ಮನೆ ಕೊಂಚ ಎಮೋಷನಲ್ ಆಗಿದೆ. ಇದಕ್ಕೆ ಕಾರಣ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿರುವ ಒಂದು ಚಟುವಟಿಕೆ.

ಇಷ್ಟು ದಿನ ಜೋರು ಗಲಾಟೆಯಿಂದ ಕೂಗಾಡುತ್ತಿದ್ದ ಸ್ಪರ್ಧಿಗಳಿಗೆ ಇದೀಗ ಮನಸ್ಸಿನ ಭಾರವನ್ನು ಇಳಿಸಲು ಬಿಗ್ ಬಾಸ್ ಒಂದು ಅವಕಾಶ ನೀಡಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಸ್ಪರ್ಧಿಗಳು ಕನ್ಫೆಷನ್ ರೂಮ್ ಒಳಗೆ ತೆರಳಿ ತಮ್ಮ ಜೀವನದಲ್ಲಿ ಆದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದರ ಪ್ರೊಮೋವನ್ನು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಬಿಗ್​ ಬಾಸ್​ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಕನ್ಫೆಷನ್ ರೂಂಗೆ ಕರೆದಿದ್ದಾರೆ. ಬಳಿಕ ನಿಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಬಿಗ್​ಬಾಸ್​ ಹೇಳಿದ್ದಾರೆ. ಈ ಸಂದರ್ಭ ಮೋಕ್ಷಿತಾ ಪೈ ತಮ್ಮ ಮದುವೆಗೆ ಸಂಬಂಧಿಸಿದ ವಿಚಾರವನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.

‘‘ನನಗೆ ಮದುವೆ ಆಗಬೇಕು ಎಂದು ಮನೆಯವರು ಹೇಳುತ್ತಲೇ ಬರುತ್ತಿದ್ದರು. ಕಳೆದ ಒಂದು ವರ್ಷದಿಂದ ಈ ವಿಚಾರಲ್ಲಿ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನು ಮದುವೆ ಆಗಿಲ್ಲ. ಇದಕ್ಕೆ ಕಾರಣ ಇದೆ. ನನ್ನ ತಮ್ಮ ವಿಶೇಷ ಚೇತನ. ಆತನಿಗೇ ನಾನೇ ಎಲ್ಲ. ನನ್ನ ಅಪ್ಪ-ಅಮ್ಮ ಕೂಡ ಇದ್ದಾರೆ. ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ನಾನು ಮದುವೆ ಆಗಿ ಹೋದರೆ ಇವರನ್ನು ನೋಡಿಕೊಳ್ಳೋದು ಯಾರು ಎಂಬ ಪ್ರಶ್ನೆ ನನಗೆ ಕಾಡುತ್ತದೆ,’’ ಎಂದು ಹೇಳಿದ್ದಾರೆ.

‘‘ನಾನು ಮದುವೆ ಆಗುವ ಹುಡುಗ ಹೇಗೆ ಇರುತ್ತಾನೊ ಗೊತ್ತಿಲ್ಲ. ಆ ಹುಡುಗ ನನ್ನನ್ನು ನನ್ನ ಕುಟುಂಬದಿಂದ ದೂರ ಮಾಡಿ ಬಿಡುತ್ತಾನೇನೋ ಎನ್ನುವ ಭಯ ಇದೆ. ಈ ಕಾರಣದಿಂದಲೇ ನನಗೆ ಮದುವೆ ಆಗೋಕೆ ಭಯ. ಈ ವಿಚಾರದಲ್ಲಿ ನಿಮಗೆ ಸಾಕಷ್ಟು ನೋವು ಕೊಟ್ಟಿದ್ದೇನೆ. ದಯವಿಟ್ಟು ಕ್ಷಮಿಸಿ,’’ ಎಂದು ಮೋಕ್ಷಿತಾ ತಂದೆ-ತಾಯಿ ಬಳಿ ಹೇಳಿ ಸ್ವಾರಿ ಎಂದು ಕೇಳಿದ್ದಾರೆ.

BBK 11: ಹನುಮಂತನ ಅಸಲಿ ಆಟ ಶುರು: ನಾಮಿನೇಷನ್ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ ಕ್ಯಾಪ್ಟನ್