Friday, 13th December 2024

ವ್ಯಕ್ತಿ ನೋಡಿ, ಮಾನವೀಯತೆಯ ದೃಷ್ಟಿಯಿಂದ ಪ್ರಚಾರ: ನಟ ದರ್ಶನ್​

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಪ್ರಚಾರ ನಡೆಸಿ ದರು.

ಅದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷ ಮತ್ತು ನಿರ್ಮಾಪಕರು ಎಂದ ಮಾತ್ರಕ್ಕೆ ನಾನು ಪ್ರಚಾರಕ್ಕೆ ಇಳಿಯುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.

ನಿರ್ಮಾಪಕ ಮುನಿರತ್ನ ಅವರು ಕರೊನಾ ಲಾಕ್ ಡೌನ್ ಸಮಯದಲ್ಲಿ ಆರ್​ಆರ್ ನಗರ ಕ್ಷೇತ್ರದ ಜನತೆಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ದಿನಸಿ ವಿತರಿಸಿದ್ದಾರೆ. ಆ ಒಂದು ಕಾರಣಕ್ಕೆ ಮಾನವೀಯತೆಯ ದೃಷ್ಟಿಯಿಂದ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ ಎಂದರು.

ಅವರು ನನ್ನ ಆಪ್ತರು ಅವರು ಕರೆದಲ್ಲಿಗೆ ತೆರಳುತ್ತೇನೆ ಎಂದಿದ್ದಾರೆ. ಅಂದಹಾಗೆ, ಇಂದು ಇಡೀ ದಿನ ದರ್ಶನ್​ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.