Wednesday, 11th December 2024

ಐವರು ಗಂಡು ಮಕ್ಕಳಿಗೆ ಪುನೀತ್​ ರಾಜ್​ಕುಮಾರ್​​​ ಎಂದು ನಾಮಕರಣ

ಬೆಂಗಳೂರು: ಇದೇ ಮಾ.೧೭ರಂದು ದಿವಂಗತ ನಟ ಡಾ. ಪುನೀತ್​ ರಾಜ್​ಕುಮಾರ್ ಅವ​​ರ ಜನ್ಮದಿನ.

ಇಂದೇ ಬೆಂಗಳೂರಿನ ಕಾಕ್ಸ್​ಟೌನ್​ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಂದನವನದ ಹಿರಿಯ ನಟಿ ತಾರಾ ಅನುರಾಧಾ ಹಾಗೂ ಪುನೀತ್ ರಾಜ್​ಕುಮಾರ್​ ಸಹೋದರಿ ಪೂರ್ಣಿಮಾ ಐವರು ಗಂಡು ಮಕ್ಕಳಿಗೆ ಪುನೀತ್​ ರಾಜ್​ಕುಮಾರ್​​​ ಎಂದು ನಾಮಕರಣ ಮಾಡಿದ್ದಾರೆ.

ಅಪ್ಪು ಜನ್ಮದಿನ ಸವಿನೆನಪಿಗಾಗಿ ತಮ್ಮ ಮಕ್ಕಳಿಗೂ ಪುನೀತ್​ ರಾಜ್​ಕುಮಾರ್​ ಎಂದೇ ನಾಮಕರಣ ಮಾಡಿಸಿದ್ದಾರೆ.

ತಾರಾ ಅನುರಾಧಾ, ಈ ತಾಯಂದಿರು ಪುನೀತ್​ ರಾಜ್​ಕುಮಾರ್​ ಅವರ ಅಭಿಮಾನಿಗಳು. ಹೀಗಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ಈ ಮಕ್ಕಳಿಗೆ ಪುನೀತ್​ ರಾಜ್​ಕುಮಾರ್​ ಎಂದು ಹೆಸರಿಟ್ಟಿದ್ದೇವೆ. ಈ ಐವರು ಗಂಡು ಮಕ್ಕಳು ಅಪ್ಪುವಿನಂತೆಯೇ ಸಮಾಜಕ್ಕೆ ಕೊಡುಗೆಯಾಗಲಿ ಎಂದು ಹಾರೈಸಿದರು.