Tuesday, 12th November 2024

ನೈಸರ್ಗಿಕ ವಿಕೋಪ: ಹಿಮಾಚಲ ಪ್ರದೇಶಕ್ಕೆ ಆಮಿರ್ ನೆರವಿನ ಹಸ್ತ

ಧರ್ಮಶಾಲಾ: ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಹಿಮಾಚಲ ಪ್ರದೇಶಕ್ಕೆ ನೆರವಿನ ಹಸ್ತವನ್ನು ಆಮಿರ್ ಚಾಚಿದ್ದಾರೆ.

ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಫ್ಲಾಪ್ ಆದ ಬಳಿಕ ಬೇರೆ ಯಾವುದೇ ಸಿನಿಮಾಗಳನ್ನು ಆಮಿರ್ ಖಾನ್ ಒಪ್ಪಿಕೊಂಡಿಲ್ಲ. ಸದ್ಯಕ್ಕೆ ಮಗಳ ಮದುವೆಗೆ ತಯಾರಿಯನ್ನೂ ಆರಂಭಿಸಿದ್ದಾರೆ. ಜೊತೆಗೆ ಕೆಲವು ಸಾಮಾಜಿಕ ಕಾರ್ಯ ಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಟ ಆಮಿರ್ ಖಾನ್ ಇದೀಗ ಹಿಮಾಚಲ ಪ್ರದೇಶದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸತತ ಮಳೆ, ಪ್ರವಾಹ ಪರಿಸ್ಥಿತಿ, ಭೂಕುಸಿತಗಳಿಂದ ಹಿಮಾಚಲ ಪ್ರದೇಶ ತತ್ತರಿಸಿದ್ದು, ಕೋಟ್ಯಂತರ ಮೌಲ್ಯ ಆಸ್ತಿ, ಹಾಗೂ ಜೀವ ಹಾನಿಯೂ ಹಿಮಾಚಲ ಪ್ರದೇಶದಲ್ಲಿ ಸಂಭ ವಿಸಿದೆ. ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕ ವಿಕೋಪಕ್ಕೆ ಈಡಾಗಿ ಸಮಸ್ಯೆಗೆ ಸಿಲುಕಿರುವ ಜನರ ಕಲ್ಯಾಣಕ್ಕಾಗಿ 25 ಲಕ್ಷ ರೂಪಾಯಿ ಹಣವನ್ನು ಆಮಿರ್ ಖಾನ್ ನೀಡಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಟ ಆಮಿರ್ ಖಾನ್ 25 ಲಕ್ಷ ರೂ. ಹಣವನ್ನು ದೇಣಿಗೆ ನೀಡಿದ್ದಾರೆ. ತನ್ನ ರಾಜ್ಯದ ಜನರ ಸಹಾಯಕ್ಕೆ ದೇಣಿಗೆ ನೀಡಿರುವ ಆಮಿರ್ ಖಾನ್​ರ ವಿಶಾಲ ಹೃದಯವನ್ನು ಹಿಮಾಚಲ ಪ್ರದೇಶ ಸಿಎಂ ಠಾಕೂರ್ ಸುಖ ವಿಂದರ್ ಸಿಂಗ್ ಸುಖು ಕೊಂಡಾಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಾ ಚಲ ಪ್ರದೇಶದ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ, ಪಟ್ಟಣಗಳಲ್ಲಿ ಭೂಕುಸಿತ ಉಂಟಾಗಿದ್ದು ಕೋಟ್ಯಂತರ ಮೌಲ್ಯದ ಆಸ್ತಿ ಹಾನಿಯಾಗಿದೆ. ಭೂಕುಸಿತದಿಂದಾಗಿ ಹಲವರು ಜೀವ ಸಹ ಕಳೆದುಕೊಂಡಿದ್ದಾರೆ.

ಅವರ ನಿರ್ಮಾಣ ಸಂಸ್ಥೆ ಕಡೆಯಿಂದ ಮಾಜಿ ಪತ್ನಿ ಕಿರಣ್ ರಾವ್, ‘ಲಾಪತಾ ಲೇಡೀಸ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿ ದ್ದಾರೆ. ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಮಗಳು ಇರಾಳ ಹೊಸ ಸಿನಿಮಾಕ್ಕೂ ಆಮಿರ್ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ.

ಆಮಿರ್ ಖಾನ್ ಪುತ್ರಿ ಇರಾ ಇತ್ತೀಚೆಗಷ್ಟೆ ತಮ್ಮ ಬಾಯ್​ಫ್ರೆಂಡ್ ನೂಪುರ್ ಶಿಖ್ರೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನೂಪುರ್ ದೈಹಿಕ ತರಬೇತಿದಾರರಾಗಿದ್ದಾರೆ. ಇಬ್ಬರೂ ಶೀಘ್ರವೇ ವಿವಾಹವಾಗಲಿದ್ದು, ವಿವಾಹದ ತಯಾರಿಯಲ್ಲಿ ಆಮಿರ್ ಖಾನ್ ಸಹ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.