Saturday, 14th December 2024

ನಿರ್ಭಯ ಚಿತ್ರದ ಮುಹೂರ್ತ ನಾಳೆ

ತುಮಕೂರು: ರಾಜ್ ಕುಣಿಗಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಾಮಾಜಿಕ ಮೌಲ್ಯ ಸಾರುವ ನಿರ್ಭಯ ಸಿನಿಮಾ ಮುಹೂರ್ತ ನ.11ರಂದು ಬೆಳಗ್ಗೆ 8.30ಕ್ಕೆ ನಗರದ ಕುಣಿಗಲ್ ರಸ್ತೆಯ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಲಿದೆ.

ಸಿದ್ದಲಿಂಗ ಸ್ವಾಮೀಜಿ ಅವರು ಸಿನಿಮಾಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಕಲಾವಿದರು, ಮುಖಂಡರು, ಸ್ಯಾಂಡಲ್ ವುಡ್ ಅಭಿನಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವರು. ನಿರ್ಭಯ ಸಿನಿಮಾವನ್ನು ಬಾಲಕೃಷ್ಣ ನಿರ್ಮಿಸುತ್ತಿದ್ದು, ಕಲ್ಪತರು ಆನಂದ್ ಕಾರ್ಯಕಾರಿ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ.

ಸಿನಿಮಾದಲ್ಲಿ ಹಿರಿಯ ಕಲಾವಿದರಾದ ಮೈಸೂರ್ ರಮಾನಂದ್, ರೇಖಾ ದಾಸ್, ಮಿಮಿಕ್ರಿ ಗೋಪಿ ಮತ್ತಿತರರು ಅಭಿನಯಿಸು ತ್ತಿದ್ದಾರೆ. ಸಿನಿಮಾ ಈಗಾಗಲೆ ಸಾಕಷ್ಟು ಕೌತುಕ ಮೂಡಿಸಿದೆ.