Wednesday, 9th October 2024

ಜ.25ರವರೆಗೆ ನಟಿ ಕಂಗನಾ ಬಂಧನವಿಲ್ಲ: ಮುಂಬೈ ಪೊಲೀಸ್

Kangana Ranaut

ಮುಂಬೈ: ನಟಿ ಕಂಗನಾ ರನೌತ್‌ ಅವರನ್ನು ಜ.25ರ ವರೆಗೆ ಬಂಧಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ಮುಂಬೈ ಪೊಲೀಸರು ಸೋಮವಾರ ತಿಳಿಸಿ ದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರನ್ನು ಪ್ರತ್ಯೇಕತಾ ವಾದಿಗಳ ಜತೆ ಹೋಲಿಸಿ ಸಾಮಾಜಿಕ ಮಾಧ್ಯಮ ಗಳಲ್ಲಿ ಸಂದೇಶ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿ, ಮುಂಬೈ ಪೊಲೀಸ್‌ ಇಲಾಖೆ ಪ್ರತಿಕ್ರಿಯಿಸಿದೆ.

ಪ್ರಕರಣವು ಕಂಗನಾ ಅವರ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ. ಹೀಗಾಗಿ ಮಧ್ಯಂತರ ವಿನಾಯಿತಿ ನೀಡುವುದಾಗಿ ನ್ಯಾಯಮೂರ್ತಿ ನಿತಿನ್ ಜಾಮಾದಾರ್ ಮತ್ತು ಸಾರಂಗ್ ಕೊತ್ವಾಲ್ ಅವರಿದ್ದ ನ್ಯಾಯ ಪೀಠ ಹೇಳಿದೆ.

ಸಿಖ್ ಸಂಘಟನೆ ನೀಡಿದ ದೂರಿನ ಆಧಾರದಲ್ಲಿ ಮುಂಬೈಯ ಖಾರ್ ಪೊಲೀಸ್ ಠಾಣೆಯಲ್ಲಿ ನವೆಂಬರ್‌ನಲ್ಲಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ರದ್ದುಪಡಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇನ್‌ಸ್ಟಾಗ್ರಾಂ ಪೋಸ್ಟ್ ಆಕ್ಷೇಪಿಸಿ ದೂರು ದಾಖಲಿಸಲಾಗಿದೆಯೇ ಹೊರತು ಯಾವುದೇ ಕಾನೂನಾತ್ಮಕ ಪ್ರಕರಣ ತಮ್ಮ ಮೇಲೆ ದಾಖಲಾಗಿಲ್ಲ ಎಂದು ವಕೀಲ ರಿಜ್ವಾನ್ ಸಿದ್ದಿಕಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಕಂಗನಾ ತಿಳಿಸಿದ್ದರು.