Friday, 13th December 2024

ಡ್ರಗ್ಗಿಣಿಯರಿಗೆ ಸದ್ಯ ಜಾಮೀನಿಲ್ಲ

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿಯರಾದ ಸಂಜನಾ ಗಲ್ರಾಣಿ ಹಾಗೂ ರಾಗಿಣಿ ದ್ವಿವೇದಿ ನವೆಂಬರ್ 2ರವರೆಗೂ ಜೈಲುವಾಸ ಅನುಭವಿಸಬೇಕಿದೆ.

ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಗಳನ್ನು ಎನ್​​​​ಡಿಪಿಎಸ್ ವಿಚಾರಣಾ ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳೆಲ್ಲರೂ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ, ತೀರ್ಪು ಕಾಯ್ದಿರಿ ಸಿದೆ.

ನ.2ರವರೆಗೂ ಹೈಕೋರ್ಟ್​ಗೆ ದಸರಾ ರಜೆ ಇದೆ. ಇದರ ನಡುವೆ ಅಕ್ಟೋಬರ್ 29ರಂದು ರಜೆ ಕಾಲದ ಪೀಠಗಳು ಕಾರ್ಯ ನಿರ್ವ ಹಿಸಲಿವೆ.