Wednesday, 11th December 2024

1971ರ ನಂತರ ಬಾಂಗ್ಲಾದೇಶದಲ್ಲಿ ಪಠಾಣ್‌ ಸಿನೆಮಾ ರಿಲೀಸ್‌

ಬಾಂಗ್ಲಾದೇಶ: ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನ ಯದ ʻಪಠಾಣ್‌ʼ ಸಿನಿಮಾ ಬಾಂಗ್ಲಾದೇಶ ದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೇ 12ರಂದು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿದೆ.

ಬಾಂಗ್ಲಾದೇಶದಲ್ಲಿ ಚಿತ್ರದ ಬಿಡುಗಡೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಯಶ್ ರಾಜ್ ಫಿಲ್ಮ್ಸ್ ಮುಖ್ಯಸ್ಥ ನೆಲ್ಸನ್ ಡಿಸೋಜಾ, “ಸಿನಿಮಾ ಯಾವಾಗಲೂ ರಾಷ್ಟ್ರ, ಜನಾಂಗಗಳು ಹಾಗೇ ಸಂಸ್ಕೃತಿಗಳನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ. ಇದು ಗಡಿಗಳನ್ನು ಮೀರಿ, ಜನರನ್ನು ಪ್ರೇರೇಪಿ, ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವಾದ್ಯಂತ ಮನ್ನಣೆ ಸಿಕ್ಕಿರುವ ಪಠಾಣ್‌ ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆʼʼಎಂದು ಹೇಳಿದ್ದಾರೆ.

“1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಪಠಾಣ್‌ ಆಗಿದೆ. ಶಾರುಖ್ ಖಾನ್ ಅವರು ಬಾಂಗ್ಲಾದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆʼʼಎಂದರು.