Wednesday, 11th December 2024

ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರು

ಹೈದರಾಬಾದ್‌: ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಧ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಕೀಯ ಕಾರ್ಯಕ್ರಮದ ನಿಮಿತ್ತಾ ಪವನ್ ಗೋದಾವರಿ ಜಿಲ್ಲೆಗಳಲ್ಲಿ ಎರಡು ದಿನದ ಪ್ರವಾಸ ಮಾಡಿದರು. ಈ ಪ್ರಕ್ರಿಯೆ ಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದು, ವೈರಲ್ ಜ್ವರ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಹಾಗಾಗಿ ಜನವಾಣಿ ಕಾರ್ಯಕ್ರಮವನ್ನ ಮುಂದೂಡಲಾಗಿದೆ.

ಈ ತಿಂಗಳ 31ರಂದು ಮತ್ತೆ ಕಾರ್ಯಕ್ರಮ ನಡೆಯಲಿದೆ ಎಂದು ಪಕ್ಷದ ಪಿಎಸಿ ಅಧ್ಯಕ್ಷ ನಾದೆಂಡ್ಲ ಮನೋಹರ್ ಹೇಳಿದರು.

ಜ್ವರದಿಂದ ಬಳಲುತ್ತಿರುವ ಪವನ್ ಪ್ರಸ್ತುತ ಹೈದರಾಬಾದ್‌ನಲ್ಲಿ ವಿಶ್ರಾಂತಿ ಪಡೆಯು ತ್ತಿದ್ದಾರೆ. ಇನ್ನು ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿ ಸುತ್ತಿದ್ದಾರೆ.