Saturday, 14th December 2024

ಅ.15ರಿಂದ ”ಪಿಎಂ ನರೇಂದ್ರ ಮೋದಿ” ಚಿತ್ರ ಮತ್ತೆ ತೆರೆಗೆ

ಮುಂಬೈ: ಕಳೆದ ವರ್ಷ 2019ರಲ್ಲಿ ಬಿಡುಗಡೆಯಾಗಿದ್ದ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ಮೋದಿ ಜೀವನಾಧಾರಿತ ”ಪಿಎಂ ನರೇಂದ್ರ ಮೋದಿ” ಚಿತ್ರ ಮತ್ತೆ ತೆರೆಗೆ ಬರಲು ಸಜ್ಜಾ ಗಿದೆ.

ಕೋವಿಡ್ ಕಾರಣದಿಂದ ಆರು ತಿಂಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳನ್ನು ಅ.15ರಿಂದ ತೆರೆಯಲು ಕೇಂದ್ರ ಸರ್ಕಾರ ಅನು ಮತಿ ನೀಡಿದೆ. ಆದರೆ ಮೊದಲ ಹಂತದಲ್ಲಿ ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾಗಲು ಹಿಂದೇಟು ತೋರುತ್ತಿವೆ. ಹೀಗಾಗಿ, ಈ ಹಿಂದೆ ಬಿಡುಗಡೆ ಯಾಗಿರುವ ಚಿತ್ರಗಳನ್ನು ಮರು ಬಿಡುಗಡೆ ಮಾಡಲು ಹಲವು ನಿರ್ಮಾಪಕರು ಉತ್ಸಾಹ ತೋರು ತ್ತಿದ್ದಾರೆ.

ಪಿಎಂ ಮೋದಿ ಜೀವನಾಧಾರಿತ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಒಮಾಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. ಉಳಿದಂತೆ, ಬೊಮಾನ್ ಇರಾನಿ, ದರ್ಶನ್ ಕುಮಾರ್, ಮನೋಜ್ ಜೋಶಿ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.