Saturday, 14th December 2024

ಇಂಡಿಗೋ ವಿಮಾನದ ಸಿಬ್ಬಂದಿ ಮಾತು ಬೆದರಿಕೆಯಂತಿತ್ತು: ನಟಿ ಪೂಜಾ ಹೆಗ್ಡೆ

ಮುಂಬೈ: ದಕ್ಷಿಣ ಭಾರತದ ನಟಿ ಪೂಜಾ ಹೆಗ್ಡೆ ಅವರು ವಿಮಾನಯಾನದ ವೇಳೆ ಉಂಟಾದ ಕೆಟ್ಟ ಅನುಭವವನ್ನು ಶೇರ್ ಮಾಡಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಫುಲ್ ವೈರಲ್ ಆಗಿದೆ.

ಪೂಜಾ ಹೆಗ್ಡೆ ಅವರು ತಾವು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಮಗೆ ವಿಮಾನ ಸಿಬ್ಬಂದಿ ಯಿಂದ ಅವಮಾನ ವಾಗಿದೆ. ಕಟುವಾದ ವರ್ತನೆ ತೋರಿದರು ಎಂದು ಪೂಜಾ ಇಂಡಿಗೋ ವಿಮಾನದ ವಿರುದ್ಧ ದೂರಿದ್ದಾರೆ. ಬಾಲಿವುಡ್ ಸೇರಿದಂತೆ ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಸದಾ ಬ್ಯುಸಿ ಯಾಗಿರುವ ಪೂಜಾ, ಇತ್ತೀಚಿಗೆ ತಮಗೆ ಮುಂಬೈನಿಂದ ಇಂಡಿಗೋ ವಿಮಾನ ದಲ್ಲಿ ಪ್ರಯಾಣಿಸುವಾಗ ಕೆಟ್ಟ ಅನುಭವವಾಗಿದೆ ಎಂದು ಆರೋಪಿಸಿದ್ದಾರೆ.

ಇಂಡಿಗೋ ವಿಮಾನದ ಸಿಬ್ಬಂದಿ ಅತ್ಯಂತ ಒರಟುತನದಿಂದ ವರ್ತಿಸಿದರು. ವಿಫುಲ್ ನಕಾಶೆ ಎಂಬ ಸಿಬ್ಬಂದಿ ನನ್ನೊಂದಿಗೆ ದುರಹಂಕಾರದಿಂದ ನಡೆದುಕೊಂಡರು. ಅವರ ಮಾತು ಬೆದರಿಕೆಯಂತಿತ್ತು.‌ ಸಾಮಾನ್ಯವಾಗಿ‌ ನಾನು ಇಂತಹ ವಿಚಾರಗಳ ಬಗ್ಗೆ ಟ್ವೀಟ್ ಮಾಡುವುದಿಲ್ಲ. ಆದರೆ ಈ ಭಾರಿ ಅನಿವಾರ್ಯವಾಗಿದೆ ಎಂದಿದ್ದಾರೆ.

ಪೂಜಾ ಹೆಗ್ಡೆಗೆ ಅವಮಾನವಾಗಿದೆ ಅನ್ನುವ ಸಂಗತಿ ಟ್ವೀಟ್ ನಲ್ಲಿ ಬಹಿರಂಗ ವಾಗುತ್ತಿದ್ದಂತೆ ಇಂಡಿಗೋ ಸಂಸ್ಥೆ ಟ್ವೀಟರ್ ನಲ್ಲಿ ಕ್ಷಮೆಯಾಚಿಸಿದೆ. ದಯಮಾಡಿ ಕ್ಷಮೆ ಇರಲಿ. ನಾವು ನಿಮ್ಮನ್ನು ಶೀಘ್ರದಲ್ಲೇ ಸಂಪರ್ಕ ಮಾಡುತ್ತೇವೆ. ನಿಮ್ಮ ಪಿಎನ್‌ಆರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಕಳುಹಿಸಿಕೊಡಿ ಎಂದು ಸಂಸ್ಥೆ ಕೇಳಿದೆ.