Wednesday, 11th December 2024

Priyanka Chopra: ಬಿಕಿನಿ ತೊಟ್ಟು ಬೀಚ್‌ ಬದಿ ಹಾಟ್‌ ಆಗಿ ಪೋಸ್‌ ನೀಡಿದ ಪ್ರಿಯಾಂಕಾ ಚೋಪ್ರಾ; ಕಿಕ್ಕೇರಿಸುವ ಫೋಟೊ ಇಲ್ಲಿದೆ

Priyanka Chopra

ಮುಂಬೈ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆ್ಯಕ್ಟೀವ್‌ ಆಗಿರುವ ಅವರು ಆಗಾಗ ತಮ್ಮ ಖಾಸಗಿ, ಹಾಟ್‌ ಫೋಟೊ ಹಂಚಿಕೊಂಡು ಅಭಿಮಾನಿಗಳ ನಿದ್ದೆಗೆಡಿಸುತ್ತಾರೆ. ಈಗಲೂ ಅವರು ತಮ್ಮ ಹೊಸ ಫೋಟೊ ಮೂಲಕ ಫ್ಯಾನ್ಸ್‌ಗೆ ಕಿಕ್ಕೇರಿಸಿದ್ದಾರೆ. ಅವರು ಬಿಕಿನಿ ಧರಿಸಿ ಹಾಟ್‌ ಆಗಿ ಪೋಸ್‌ ಕೊಟ್ಟಿರುವ ಫೋಟೊಗಳು ಇದಾಗಿದ್ದು, ಇಂಟರ್‌ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಪ್ರಿಯಾಂಕಾ ಚೋಪ್ರಾಗೆ ಈಗ 42 ವರ್ಷ ವಯಸ್ಸು. ಆದರೆ 22 ವರ್ಷದ ಯುವತಿಯರೂ ನಾಚುವಂತೆ ಫಿಟ್‌ ಆಗಿದ್ದಾರೆ. ಅದಕ್ಕೆ ಉದಾಹರಣೆಯೇ ಈ ಫೋಟೊಗಳು. ಸದ್ಯ ಅವರು ತಮ್ಮ ಪತಿ ನಿಕ್‌ ಜೋನಸ್‌ ಮತ್ತು ಮಗಳು ಮಾಲ್ತಿ ಮೇರಿ ಜೊತೆ ಯುರೋಪ್‌ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಈ ಖುಷಿಯ ಕ್ಷಣಗಳನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಮುದ್ರ ತೀರದಲ್ಲಿ, ಬಿಸಿಲಿಗೆ ಮೈಯೊಡ್ಡಿ ಪ್ರಿಯಾಂಕಾ ತಹೇವಾರಿ ಫೋಸ್‌ ಕೊಟ್ಟಿದ್ದಾರೆ. ಈ ಪೈಕಿ ಅವರು ಬಿಕಿನಿ ತೊಟ್ಟು ತಮ್ಮ ಅದ್ಭುತ ಮೂಮಾಟವನ್ನು ಪ್ರದರ್ಶಿಸುವ ಫೋಟೋ ನೋಡಿ ಅಭಿಮಾನಿಗಳು ಕಳೆದೇ ಹೋಗಿದ್ದಾರೆ. ಪತಿ ನಿಕ್‌ ಜೋನಸ್‌ ಅವರೊಂದಿಗೆ ಸಮುದ್ರ ಮಧ್ಯೆ ಬೋಟ್‌ನಲ್ಲಿ ಬಿಕಿನಿ ತೊಟ್ಟ ಪಿಗ್ಗಿಯನ್ನು ನೋಡಿ ಹಲವರು ಕಣ್ಣರಳಿದ್ದಾರೆ. ಜೊತೆಗೆ ನೀಲಿ ನೀರಿನ ಮಧ್ಯೆ ಬೋಟ್‌ನಲ್ಲಿ ಮಲಗಿರುವ ಫೋಟೋ ಕೂಡ ಗಮನ ಸೆಳೆದಿದೆ. ಮಾತ್ರವಲ್ಲ ಅವರು ಮಗಳು, ಪತಿಯೊಂದಿಗೆ ಖುಷಿಯಿಂದ ಸಮಯ ಕಳೆಯುತ್ತಿರುವ ವೀಡಿಯೊಗಳನ್ನೂ ಪೋಸ್ಟ್‌ ಮಾಡಿದ್ದಾರೆ. ಹಲವರು ಹಾರ್ಟ್‌ ಎಮೋಜಿ ಮೂಲಕ ಈ ಪೋಸ್ಟ್‌ಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವಯಸ್ಸಿನಲ್ಲೂ ಫಿಟ್‌ & ಫೈನ್‌ ಆಗಿರುವ ತಮ್ಮ ನೆಚ್ಚಿನ ತಾರೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

2000ರಲ್ಲಿ ಮಿಸ್‌ ವರ್ಲ್ಡ್‌ ಆಗಿ ಆಯ್ಕೆಯಾಗಿದ ಪ್ರಿಯಾಂಕಾ 2002ರಲ್ಲಿ ವಿಜಯ್‌ ಅಭಿನಯದ ʼತಮಿಳನ್‌ʼ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ 2003ರಲ್ಲಿ ʼದಿ ಹೀರೋ: ಲವ್‌ ಸ್ಟೋರಿ ಆಫ್‌ ಎ ಸ್ಪೈʼ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟು ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡರು. ಗ್ಲಾಮರ್‌ ಮಾತ್ರವಲ್ಲ ಅಭಿನಯಕ್ಕೆ ಪ್ರಾಶಸ್ತ್ಯವಿರುವ ಚಿತ್ರಗಳಲ್ಲಿ ನಟಿಸುವ ಮೂಲಕ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. 2008ರಲ್ಲಿ ತೆರೆಕಂಡ ʼಫ್ಯಾಷನ್‌ʼ ಹಿಂದಿ ಚಿತ್ರದಲ್ಲಿನ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಿಯಾಂಕಾ ನಿರ್ಮಾಪಕಿಯಾಗಿಯೂ, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

2013ರಲ್ಲಿ ʼಗರ್ಲ್‌ ರೈಸಿಂಗ್‌ʼ ಎಂಬ ಇಂಗ್ಲಿಷ್‌ ಸಾಕ್ಷ್ಯ ಚಿತ್ರದಲ್ಲಿ ನಟಿಸಿದ ಪ್ರಿಯಾಂಕಾ ಅದಾದ ಬಳಿಕ 2017ರಲ್ಲಿ ತೆರೆಕಂಡ ʼಬೇವಾಚ್‌ʼ ಹಾಲಿವುಡ್‌ ಚಿತ್ರದ ಮೂಲಕ ಗ್ಲೋಬಲ್‌ ಸ್ಟಾರ್‌ ಪಟ್ಟಕ್ಕೇರಿದರು. ನಂತರ ನಿರಂತರವಾಗಿ ಇಂಗ್ಲಿಷ್‌ ಚಿತ್ರ, ವೆಬ್‌ ಸೀರಿಸ್‌ಗಳಲ್ಲಿ ಅಭಿನಯಿಸುತ್ತಿದ್ದಾರೆ. 2018ರಲ್ಲಿ ಪ್ರಿಯಾಂಕಾ ಅಮೇರಿಕ ಮೂಲದ ಗಾಯಕ ನಿಕ್‌ ಜೋನಸ್‌ನನ್ನು ವರಿಸಿದರು. ಈ ದಂಪತಿಗೆ ಮಾಲ್ತಿ ಮೇರಿ ಎನ್ನುವ ಮಗಳಿದ್ದಾಳೆ.

ಈ ಸುದ್ದಿಯನ್ನೂ ಓದಿ: Shah Rukh Khan: ದೀಪಿಕಾ ಪಡುಕೋಣೆ, ಮಗು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಶಾರುಖ್‌ ಖಾನ್‌