Wednesday, 11th December 2024

ಸಿಂಗರ್‌ ಆಗಿ ಪ್ರಿಯಾಂಕಾ ವಾರಿಯರ್‌ ತೆಲುಗುನಲ್ಲಿ ಮಿಂಚಲು ರೆಡಿ

ಹೈದರಾಬಾದ್‍: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್‍ ಆದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್‍ ವಾರಿಯರ್‌ ಮಲಯಾಳಂ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದು ತಿಳಿದಿರುವುದೇ.

ಈಗ ತೆಲುಗಿನ ಎರಡು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಶ್ರೀನಿವಾಸ ಕಲ್ಯಾಣಂ ಚಿತ್ರದ ಖ್ಯಾತಿಯ ನಿತಿನ್‍ ಹಾಗೂ ಚಂದ್ರಶೇಖರ್ ಯೆಲೆಟಿ ಅವರ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ರಕುಲ್‍ ಪ್ರೀತ್‍ ಸಿಂಗ್‍ ಇನ್ನೋರ್ವ ನಟಿ. ಅಲ್ಲದೇ, ತೆಲುಗುನಲ್ಲಿ ಸಿಂಗರ್‌ ಆಗಿಯೂ ಛಾಪು ಒತ್ತಲಿದ್ದಾರೆ ಪ್ರಿಯಾ.

ಈಗಾಗಲೇ ಆಕೆ ಹಾಡಿರುವ ಒಂದು ಹಾಡು ಕೂಡ ರೆಕಾರ್ಡ್ ಆಗಿದೆ. ಈ ಮೂಲಕ ತೆಲುಗು ಹಾಗೂ ಮಲಯಾಳಂನಲ್ಲಿ ತನ್ನ ವೃತ್ತಿ ಜೀವನ ಮುಂದುವರಿಸುವ ತವಕದಲ್ಲಿದ್ದಾರೆ.