ಪುರುಷೋತ್ತಮ ಕಣಗಾಲ್, ಹೆಸರಾಂತ ಸಾಹಿತಿ ಪುರುಷೋತ್ತಮ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣನ ಮಗ ಪುರು ಷೋತ್ತಮ ಕಣಗಾಲ್ ಅವರು ಕನ್ನಡದ ಸಾಕಷ್ಟು ಚಿತ್ರಗಳಿಗೆ ಗೀತ ರಚನೆ ಮಾಡಿದ್ದಾರೆ.
ಕಣಗಾಲ್ ನೃತ್ಯಾಲಯ ಹಾಗೂ ಪುಟ್ಟಣ್ಣ ಕಣಗಾಲ್ ಟ್ರಸ್ಟ್ನ ಮುಖ್ಯಸ್ಥರಾಗಿ ಪುರುಷೋ ತ್ತಮ ಕಣಗಾಲ್ ಕಾರ್ಯ ನಿರ್ವಹಿಸಿದ್ದರು. ಮಗ ಹಾಗೂ ಮಗಳನ್ನು ಬಿಟ್ಟು ಪುರುಷೋ ತ್ತಮ ಕಣಗಾಲ್ ಅಗಲಿದ್ದಾರೆ.
ಸದ್ಯ ಮಗಳ ಜೊತೆ ನೆಲೆಸಿರುವ ಪುರುಷೋತ್ತಮ ಕಣಗಾಲ್ ಅಂತ್ಯ ಸಂಸ್ಕಾರ ಅಮೆರಿಕ ದಲ್ಲಿಯೇ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ.