Wednesday, 11th December 2024

ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಜ.19ಕ್ಕೆ ಮುಂದೂಡಿಕೆ

ನವದೆಹಲಿ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರಾಗಿಣಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು, ನ್ಯಾಯಪೀಠವು ಜ.19ಕ್ಕೆ ಮುಂದೂಡಿದೆ.

ನಟಿ ರಾಗಿಣಿ ಪರ ವಕೀಲರು ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಂತ ನ್ಯಾಯಪೀಠವು, ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಿಕೆ ಮಾಡಿದೆ. ಇದರಿಂದಾಗಿ ಸದ್ಯಕ್ಕೆ ನಟಿ ರಾಗಿಣಿಗೆ ಜಾಮೀನು ಸಿಗದೇ, ಜೈಲೇ ಗತಿಯೆನ್ನುವಂತೆ ಆಗಿದೆ.