ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಟಾಸ್ಕ್ಗಳು ಕಠಿಣವಾಗುತ್ತಾ ಸಾಗುತ್ತಿದ್ದು, ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಕಳೆದ ವಾರ ನೋ ಎಲಿಮಿನೇಷನ್ ವೀಕ್ ಆಗಿತ್ತು. ಹೀಗಾಗಿ ಈ ವಾರ ಎಂಟು ಜನ ನಾಮಿನೇಟ್ ಆಗಿರುವವರ ಪೈಕಿ ಯಾರು ಹೋಗುತ್ತಾರೆ ಎಂಬುದು ನೋಡಬೇಕಿದೆ. ಇದರ ನಡುವೆ ಮನೆಯೊಳಗೆ ಈ ವಾರ ಯಾರು ಉತ್ತಮ-ಕಳಪೆ ಎಂಬ ಡಿಸ್ಕಷನ್ ನಡೆದಿದೆ. ಈ ವೇಳೆ ಧನರಾಜ್ಗೆ ರಜತ್ ಹೊಡೆದಂತೆ ಕಾಣುತ್ತಿದೆ.
ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೊಮೋ ಬಿಟ್ಟಿದ್ದು, ಇದರಲ್ಲಿ ಧನರಾಜ್ ಹಾಗೂ ರಜತ್ ನಡುವೆ ಮಾರಾಮಾರಿ ನಡೆದಿದೆ. ಧನರಾಜ್ ಅವರು ಕಳಪೆಗೆ ರಜತ್ ಕಿಶನ್ ಹೆಸರನ್ನು ತೆಗೆದುಕೊಂಡಿದ್ದಾರೆ. ‘‘ನನ್ನ ಕಳಪೆ ಬಂದುಬಿಟ್ಟು ರಜತ್. ಕೈಕಾಲು ಮುರೀತಿನಿ ಅಂತಾರೆ, ಬೆದರಿಕೆ ಹಾಕೋ ಥರಾ ಅವರ ಮಾತುಗಳು ಇರುತ್ತದೆ’’ ಎಂಬ ಕಾರಣ ನೀಡಿದ್ದಾರೆ.
ಇದರಿಂದ ಸಿಟ್ಟಾದ ರಜತ್, ಅಂದು ನೀವು ನನ್ನ ಮುಖವನ್ನು ಟಚ್ ಮಾಡಿದಾಗ ಅದು, ಸಾಫ್ಟ್ ಆಗಿರಲಿಲ್ಲ ಎಂದಿದ್ದಾರೆ. ಅದಕ್ಕೆ ಧನರಾಜ್, ನನಗೆ ಗೊತ್ತು, ನಾನು ಎಷ್ಟು ಸಾಫ್ಟ್ ಆಗಿ ಮಾಡಿದ್ದೀನಿ ಎಂದು ಅಂತಾ ಹೇಳುತ್ತಾರೆ. ಮತ್ತೆ ಕೌಂಟರ್ ಕೊಟ್ಟ ರಜತ್, ನೀನೇನು ಮಗು ಮುಟ್ಟಿದ ಹಾಗೆ ಮುಟ್ಟಿರೋದಾ?, ನಾನೇನು ನಿನ್ನೆ ಮೊನ್ನೆ ಹುಟ್ಟಿ ಬಿಗ್ ಬಾಸ್ಗೆ ಬಂದಿಲ್ಲ. ನನಗೆ ಬರ್ತಿರೋ ಸಿಟ್ಟಿಗೆ ನಿನ್ನ ಮಕ-ಮೂತಿ ಒಡೆದು ಹಾಕಿಯೇ ಆಚೆ ಹೋಗಬೇಕಾಗಿತ್ತು ಎಂದಿದ್ದಾರೆ.
ಭಿನ್ನಾಭಿಪ್ರಾಯಗಳ ಹೊಳೆ, ರಂಪಾಟಗಳ ರಾಡಿ!
— Colors Kannada (@ColorsKannada) December 13, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/o0USlzy6j2
ರಜತ್ ಅವರ ಈ ಮಾತು ಧನುಗೆ ಸಿಟ್ಟು ತರಿಸಿದೆ. ಅದೇನೋ ಮುಕ-ಮೂತಿ ಒಡೆಯುತ್ತೀನಿ ಅಂದ್ರಲ್ಲ. ಹೊಡೆಯಿರಿ ನೋಡೋಣ ಎಂದಿದ್ದಾರೆ. ನಿಂಗೆ ತಾಖತ್ತಿದ್ದರೆ ನನ್ನ ಮುಟ್ಟಿ ತೋರಿಸೋ ಎಂದು ಧನು ಮೇಲೆ ರಜತ್ ಮತ್ತಷ್ಟು ಗರಂ ಆಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಧನು ಹೊಡೆಯುತ್ತೀರಾ.. ಹೊಡೆಯಿರಿ.. ಎಂದಿದ್ದಾರೆ. ಆಗ ರಜತ್ ಅವರು, ಧನು ಮೇಲೆ ಕೈಮಾಡಲು ಹೋಗಿದ್ದಾರೆ. ಆದರೆ, ಇಲ್ಲಿ ರಜತ್ ನಿಜಕ್ಕೂ ಧನರಾಜ್ಗೆ ಹೊಡೆದಿದ್ದಾರ ಎಂಬುದು ಇಂದಿನ ಎಪಿಸೋಡ್ನಲ್ಲಿ ತಿಳಿದುಬರಬೇಕಿದೆ.