Saturday, 14th December 2024

ಮಾಸ್ ಆಗಿ ಮನಗೆದ್ದು ಭರವಸೆ ಮೂಡಿಸಿದ ರಾಜವರ್ಧನ್

ಬಿಚ್ಚುಗತ್ತಿ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಭರವಸೆ ಮೂಡಿಸಿರುವ ರಾಜವರ್ಧನ್, ಹೊಸ ವರ್ಷದಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ರಾಜವರ್ಧನ್ ನಾಯಕ ನಟನಾಗಿ ಅಭಿನಯಿಸಿರುವ ಹಿರಣ್ಯ, ಪ್ರಣಯಂ, ಗಜರಾಮ ಮತ್ತು ಕ್ಯಾಪ್ಚರ್ ಈ ನಾಲ್ಕು ಸಿನಿಮಾಗಳು ಒಂದರ ಹಿಂದೊಂದ ರಂತೆ ಬಿಡುಗಡೆಗೆ ಸಿದ್ಧವಾಗಿವೆ. ಈ ಸಿನಿಮಾಗಳ ಪೈಕಿ ಈಗಾಗಲೇ ಕೆಲವು ಸಿನಿಮಾ ಗಳು ಸೆನ್ಸಾರ್ ಕೂಡ ಆಗಿದ್ದು, ಫಸ್ಟ್ ಲುಕ್, ಸಾಂಗ್ಸ್, ಟೀಸರ್ ಬಿಡುಗಡೆಯಾಗಿವೆ.

ಹೀಗಾಗಿ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಅತಿ ಹೆಚ್ಚು ಸಿನಿಮಾಗಳ ನಾಯಕ ನಟ ಎಂಬ ಹೆಗ್ಗಳಿಕೆ ರಾಜವರ್ಧನ್ ಅವರಿಗಿದೆ. ರಾಜವರ್ಧನ್ ಅಭಿನಯದ ನಾಲ್ಕು ಸಿನಿಮಾಗಳು ಕೂಡ ನಾಲ್ಕು ವಿಭಿನ್ನ ಶೈಲಿ ಯ ಸಿನಿಮಾಗಳಾಗಿದ್ದು, ವಿಭಿನ್ನ ಕಥಾಹಂದರವನ್ನು ಒಳಗೊಂಡಿವೆ. ಆ್ಯಕ್ಷನ್, ಲವ್, ರೊಮ್ಯಾಂಟಿಕ್, ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಸೆಂಟಿಮೆ0ಟ್ ಅಂಶಗಳು ಸಿನಿಮಾದಲ್ಲಿ ಮಿಳಿತವಾಗಿವೆ.

ರಾಜವರ್ಧನ್ ಅವರ ಮೊದಲ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಪಾರ ನಿರೀಕ್ಷೆ ಇದೆ. ಚಿತ್ರದ ಕಥೆಗೆ ತಕ್ಕಂತೆ ಸಿದ್ಧತೆ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿರುವ ರಾಜವರ್ಧನ್, ಅದ್ದೂರಿಯಾಗಿ ಮಿಂಚಲಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.