Thursday, 18th April 2024

ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ

Annaathe

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ , ಅಭಿಮಾನಿಗಳ ‘ತಲೈವಾ’ ಭಾರತೀಯ ಸಿನಿಮಾರಂಗದ ‘ಕಬಾಲಿ’ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು 71 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಈಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿಯೇ ಸ್ಕ್ರೀನ್ ಮೇಲೆ ಅವರೇ ಸರಿಸಾಟಿ. ರಜನಿ ವಿಶ್ವಾದ್ಯಂತ ಅಭಿಮಾನಿಗಳನ್ನ ಹೊಂದಿದ್ದಾರೆ.

ಅಳಿಯ ಕಾಲಿವುಡ್ ನ ನಟ ಧನುಶ್ ಕೂಡ ಟ್ವೀಟ್ ಮಾಡಿದ್ದು, ‘ಹ್ಯಾಪಿ ಬರ್ತ್ ಡೇ ಮೈ ತಲೈವಾ, ಒನ್ ಅಂಡ್ ಓನ್ಲಿ ಸೂಪರ್ ಸ್ಟಾರ್ ” ಎಂದು ಬರೆದು ವಿಶ್ ಮಾಡಿದ್ದಾರೆ..

ರಜನಿಕಾಂತ್ ಅವರಿಗೆ ಕುಟುಂಬದವರು, ಸ್ನೇಹಿತರು,ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿದೆ.

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿ ಹುಟ್ಟಿದ್ದು ಡಿಸೆಂಬರ್ 12, 1950ರಲ್ಲಿ ಬೆಂಗಳೂರಿನಲ್ಲಿ. ಮೂಲ ಹೆಸರು ಶಿವಾಜಿ ರಾವ್ ಗಾಯಕ್‌ ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ರಜಿನಿಕಾಂತ್ ತನ್ನ ಬಾಲ್ಯದ ಶಿಕ್ಷಣ , ಕಾಲೇಜು ವಿದ್ಯಾಭ್ಯಾಸ ಮುಗಿಸಿ ಅಲ್ಲಿಂದ ದುಡಿಯಲು ಆರಂಭಿಸಿದ್ದರು. ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ ರಜಿನಿಕಾಂತ್‌ ಮದ್ರಾಸ್‌ನಲ್ಲಿ ಆಕ್ಟಿಂಗ್ ತರಬೇತಿಯನ್ನು ಪಡೆದುಕೊಂಡಿದ್ದರು. ಜನಪ್ರಿಯ ನಿರ್ದೇಶಕರಾಗಿದ್ದ ಬಾಲಚಂದರ್ ರಜಿನಿ ಅವರನ್ನು ಮೊದಲು ಚಿತ್ರರಂಗಕ್ಕೆ ಪರಿಚಯಿಸಿದವರು.

1975ರಲ್ಲಿ ‘ಅಪೂರ್ವ ರಾಗಂಗಳ್’ ಸಿನಿಮಾ ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ‘ಮುತ್ತು’ ಮತ್ತೆ ಹಿಂದುರಿಗಿ ನೋಡಲೇ ಇಲ್ಲ.

ಕನ್ನಡ , ತೆಲುಗು , ತಮಿಳು , ಹಿಂದಿ ಹೀಗೆ ಬಹುಭಾಷೆಗಳಲ್ಲಿ ನಟಿಸಿದ ರಜನಿ ಅವರು ತಮ್ಮ ವಿಭಿನ್ನ ಸ್ಟೈಲ್ ಮ್ಯಾನರಿಸಂನ ಮೂಲಕವೇ ಅಭಿಮಾನಿಗಳನ್ನ ಸಂಪಾದನೆ ಮಾಡಿದರು.

error: Content is protected !!