Wednesday, 11th December 2024

ಸೊಂಟದ ಮೇಲಿದ್ದ ರಿತೇಶ್ ಟ್ಯಾಟೂ ತೆಗೆದ ರಾಖಿ

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ದೇಹದ ಮೇಲಿದ್ದ ಮಾಜಿ-ಪತಿಯ ಟ್ಯಾಟೂ ಹೆಸರನ್ನು ತೆಗೆದು ಹಾಕಿರು ವುದು ಸಾಮಾಜಿಕ ಜಾಲತಾಣ ದಲ್ಲಿ ಸದ್ದು ಮಾಡುತ್ತಿದೆ.

ರಾಖಿ ಸಾವಂತ್ ಮತ್ತು ರಿತೇಶ್ ತಮ್ಮ ಬಿಗ್ ಬಾಸ್ ದಿನಗಳಲ್ಲಿ ನೋಡುಗರ ಗಮನ ಸೆಳೆಯುತ್ತಿದ್ದರು. ವಾಸ್ತವವಾಗಿ BB 15ರ ಗ್ರ್ಯಾಂಡ್ ಫಿನಾಲೆಯಲ್ಲಿ ರಾಖಿ ಮತ್ತು ರಿತೇಶ್ ಅವರ ಲಿಪ್-ಲಾಕ್ ಯಾರೂ ಕೂಡ ಮರೆತಿಲ್ಲ. ಫೆಬ್ರವರಿಯಲ್ಲಿ ರಾಖಿ ಮತ್ತು ರಿತೇಶ್ 3 ವರ್ಷಗಳ ಒಗ್ಗಟ್ಟಿನ ಜೀವನಕ್ಕೆ ಬ್ರೇಕ್ ಹಾಕಿರುವುದಾಗಿ ಘೋಷಿಸಿದರು. ಇದೀಗ ರಾಖಿ ಸೊಂಟದ ಮೇಲಿದ್ದ ರಿತೇಶ್ ಟ್ಯಾಟೂವನ್ನು ತೆಗೆದಿದ್ದಾಳೆ.

ರಾಖಿ ತನ್ನ ಮಾಜಿ ಗಂಡನ ಹೆಸರನ್ನು ತನ್ನ ದೇಹದಿಂದ ತೆಗೆದುಹಾಕಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಟ್ಯಾಟೂ ತೆಗೆದುಹಾಕುವ ವಿಡಿಯೊವನ್ನು ಹಂಚಿ ಕೊಂಡಿದ್ದಾರೆ. ಆಜ್ ಮೇ ಅಪ್ನಾ ಯೇ ರಿತೇಶ್ ಟ್ಯಾಟೂ ನಿಕಲ್ನೆ ವಾಲಿ ಹೂನ್ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ರಾಖಿ, “3 ಸಾಲ್ ಶಾದಿ ಕೆ ಬಾದ್.. ರಿತೇಶ್ ತುಮ್ ಪರ್ಮನೆಂಟ್ಲಿ ಮೇರಿ ಜಿಂದಗಿ ಸೇ ಔರ್ ಮೇರಿ ಬಾಡಿ ಸೇ ನಿಕಲ್ ಗಯೇ ಹೋ” ( ಮೂರು ವರ್ಷಗಳ ನಂತರ ರಾಕೇಶ್ ನೀನು ನನ್ನ ಜೀವನದಿಂದ ಹಾಗೂ ನನ್ನ ದೇಹದಿಂದ ಶಾಶ್ವತವಾಗಿ ಹೊರಗುಳಿಯುವೆ) ಎಂದು ಹೇಳಿದ್ದಾರೆ.

ಪ್ರೀತಿಯಲ್ಲಿ ಹುಚ್ಚರಾಗಿ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳಬಾರದು. ನಂತರ ಅದನ್ನು ತೆಗೆದುಹಾಕಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.