Friday, 13th December 2024

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರಮ್ಯ ಕೃಷ್ಣನ್

ಬೆಂಗಳೂರು: ಬಹುಭಾಷಾ ನಟಿ ರಮ್ಯ ಕೃಷ್ಣನ್ ಬುಧವಾರ ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

1984ರಲ್ಲಿ ತೆರೆಕಂಡ ‘ವೆಲ್ಲೈ ಮನಸು’ ಎಂಬ ತಮಿಳು ಚಿತ್ರದ ಮೂಲಕ ರಮ್ಯಕೃಷ್ಣನ್ ತಮ್ಮ ಸಿನಿಪಯಣ ಆರಂಭಿಸಿದರು. ‘ಕೃಷ್ಣ ರುಕ್ಮಿಣಿ’ ಸಿನಿಮಾ ಮೂಲಕ 1988ರಲ್ಲಿ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟ ಅವರು, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಅವರ ನೀಲಾಂಬರಿ, ಕ್ರೇಜಿಸ್ಟಾರ್‌ ರವಿಚಂದ್ರನ್‌ ಜತೆಗಿನ ಮಾಂಗಲ್ಯಂ ತಂತುನಾನೇನ ಚಿತ್ರಗಳು ಹಿಟ್‌ ಚಿತ್ರಗಳು.

ಪ್ರಬಾಸ್ ನಟನೆಯ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಎಂಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದರು. ಈ ಸಿನಿಮಾ ಮೂಲಕ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಅವಾರ್ಡ್ ಪಡೆದುಕೊಂಡರು. ಸಾಕಷ್ಟು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿನಿತಾರೆಯರಿಂದ ರಮ್ಯಕೃಷ್ಣನ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.