Wednesday, 11th December 2024

ಆನ್‌ಲೈನ್ ಬೆಟ್ಟಿಂಗ್ ಆಯಪ್ ಪ್ರಕರಣ: ನಟ ರಣಬೀರ್’ಗೆ ಸಮನ್ಸ್

ನವದೆಹಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆಯಪ್ ಪ್ರಕರಣಕ್ಕೆ ಸಂಬಂಧಿಸಿ ನಟ ರಣಬೀರ್ ಕಪೂರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಇ ಡಿ ಸಮನ್ಸ್ ನೀಡಿದ್ದು, ನಟ ಸಮನ್ಸ್ ಸ್ವೀಕರಿಸಿದ್ದಾರೆ.

ರಣಬೀರ್ ಕಪೂರ್ ಅವರ ಹೇಳಿಕೆಯನ್ನು ಸಾಕ್ಷಿಯಾಗಿ ಇ ಡಿ ದಾಖಲಿಸಲಿದೆ ಎಂದು ತಿಳಿದು ಬಂದಿದೆ. ರಣಬೀರ್ ಕಪೂರ್ ಅವರ ಮಹಾದೇವ್ ಬೆಟ್ಟಿಂಗ್ ಆಯಪ್‌ ಪರವಾಗಿ ಪ್ರಚಾರ ಮಾಡಿದ್ದರು.

ಆಯಪ್ ಒಂದು ಆನ್‌ಲೈನ್ ಬೆಟ್ಟಿಂಗ್ ಆಯಪ್ ವೇದಿಕೆಯಾಗಿದ್ದು, ಅದರ ಹಣಕಾಸು ವ್ಯವಹಾರಗಳ ಕುರಿತು ಇ ಡಿ ತನಿಖೆ ನಡೆಸುತ್ತಿದೆ. ಆಯಪ್‌ ಹವಾಲಾ ಹಗರಣದಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಇ ಡಿ ತನಿಖೆ ಕೈಗೊಂಡಿವೆ.

ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಪ್ರಚಾರ ಮಾಡಿದ ಕಂಪನಿಯನ್ನು ದುಬೈನಿಂದ ನಡೆಸಲಾ ಗುತ್ತಿತ್ತು ಮತ್ತು ಬೇನಾಮಿ ಖಾತೆಗಳ ಮೂಲಕ ಹಣ ಲಪಟಾಯಿಸಲಾಗಿದೆ ಎಂಬ ಆರೋಪವಿದೆ. ಫೆಬ್ರವರಿ 2023 ರಲ್ಲಿ ಚಂದ್ರಕರ್ ಅವರು 200 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ ಅದ್ಧೂರಿ ವಿವಾಹ ಸಮಾರಂಭ ಏರ್ಪಡಿಸಿದ್ದರು. ಬಳಿಕ ಅಕ್ರಮ ವ್ಯವಹಾರದ ಹಗರಣ ಬೆಳಕಿಗೆ ಬಂತು.

ಚಂದ್ರಕರ್ ಅವರ ಮದುವೆಗೆ ಬಾಲಿವುಡ್‌ನ ಬಹುದೊಡ್ಡ ಸೆಲೆಬ್ರಿಟಿ‌ಗಳು ಆಗಮಿಸಿದ್ದರು.