Saturday, 14th December 2024

ಬಾಲಿವುಡ್‌ನ ಗೂಢಚಾರಿಕೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

ಮುಂಬೈ: ಕಿರಿಕ್‌ ಪಾರ್ಟಿ, ಅಂಜನಿ ಪುತ್ರ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆ ನಟಿಸಿ, ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸ್ಟೂಡೆಂಟ್‌ ಆಫ್‌ ದಿ ಇಯರ್‌ ಚಿತ್ರದ ಸಿದ್ದಾರ್ಥ್‌ ಮಲ್ಹೋತ್ರಾ ಅವರ ಮಿಶನ್ ಮಜ್ನೂ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಮಿಷನ್‌ ಮಜ್ನೂ ಚಿತ್ರವೂ ಒಂದು  ಕಥಾಚಿತ್ರವಾಗಿದ್ದು, ಉರಿ ಚಿತ್ರ ನಿರ್ಮಿಸಿದ ರೋನಿ ಸ್ಕ್ರೆವಾಲಾ ಅವರು ಮಿಷನ್‌ ಮಜ್ನೂ ಚಿತ್ರಕ್ಕಾಗಿ ಅಮರ್‌ ಬುಟಾಲಾ ಮತ್ತು ಗರೀಮಾ ಮೆಹ್ತಾ ಅವರೊಂದಿಗೆ ಕೈಜೋಡಿಸಿದ್ದಾರೆ.

ಚಿತ್ರವು 1970 ರ ಒಂದು ರಹಸ್ಯ ಕಾರ್ಯಾಚರಣೆ ಕುರಿತಾಗಿದ್ದು, ಈ ಮೂಲಕ ಭಾರತ ಮತ್ತು ಪಾಕಿಸ್ತಾನ ಸಂಬಂಧದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ.  ಪರ್ವೇಜ್ ಶೇಖ್‌, ಅಸೀಮ್‌ ಅರೋರಾ ಹಾಗೂ ಸುಮಿತ್‌ ಜತೇಜಾ ಮುಂತಾದವರ ಚಿತ್ರಕಥೆ ಇದೆ. ಸಿದ್ದಾರ್ಥ್‌ ರಾ ಏಜೆಂಟ್‌ ಪಾತ್ರದಲ್ಲಿ ಮಿಂಚಿದ್ದಾರೆ. ಶಂತನು ಭಗ್ಚಿ ನಿರ್ದೇಶನವಿದೆ.

ರೋನಿ ಅವರ ಮಾತಿನಲ್ಲಿ ಹೇಳುವಂತೆ, ದೇಶದ ಹಿತಾಸಕ್ತಿ ರಕ್ಷಣೆಗಾಗಿ ಶತ್ರು ರಾಷ್ಟ್ರದಲ್ಲಿ ಕಾರ್ಯಾಚರಿಸುವ ಭಾರತೀಯ ಏಜೆಂಟರುಗಳ ಸೇವೆ ಬೆಳಕಿಗೆ ಬರುವುದಿಲ್ಲ. ಅಂಥ ಹೀರೋಗಳನ್ನು ಬೆಳಕಿಗೆ ತರುವಂಥ ಕಥಾಚಿತ್ರವೇ ಇದು ಎಂದು ಹೇಳಿ ದ್ದಾರೆ. ಅಮರ್‌ ಬುಟಾಲಾ ಅವರು ಈಗಾಗಲೇ ಭಜರಂಗ ಭಾಯಿಜಾನ್‌ ಹಾಗೂ ಕೇಸರಿ ಚಿತ್ರ‍ಕ್ಕಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.