Thursday, 3rd October 2024

Rashmika Mandanna : ಅಪಘಾತದಲ್ಲಿ ಗಾಯಗೊಂಡಿದ್ದಾರೆ ರಶ್ಮಿಕಾ ಮಂದಣ್ಣ; ಏನಾಯಿತು ಎಂದು ವಿವರಿಸಿದ ನಟಿ

Rashmika Mandanna

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕಳೆದ ತಿಂಗಳು ಸಣ್ಣ ಅಪಘಾತಕ್ಕೆ ಒಳಗಾಗಿದ್ದರು. ಅವರೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ತಮಗೆ ಆದ ಕಹಿ ಘಟನೆಯನ್ನು ತಮ್ಮ ಅಭಿಮಾನಿಗಳಿಗಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಅದೇ ಕಾರಣಕ್ಕೆ ತಾವು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಬಹುಬೇಡಿಕೆಯ ನಟಿ ತನ್ನ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಲು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಬಳಸಿಕೊಂಡರು. ಜತೆಗೆ ಎಕ್ಸ್‌ನಲ್ಲಿಯೂ ಪೋಸ್ಟ್‌ ಮಾಡಿದ್ದಾರೆ. ಅಪಘಾತದ ಯಾವುದೇ ವಿವರಗಳನ್ನು ಅವರು ಬಹಿರಂಗಪಡಿಸದಿದ್ದರೂ, ತಾವು ಚೇತರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಕನ್ನಡಕ ಧರಿಸಿ, ತಲೆಯನ್ನು ಹಿಡಿದುಕೊಂಡು ಪೆದ್ದು ಮುಖವನ್ನು ಮಾಡುತ್ತಿರುವ ಚಿತ್ರವನ್ನು ಸಹ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

“ಹೇ ಗೆಳೆಯರೇ, ನೀವು ಹೇಗಿದ್ದೀರಿ? ನಾನು ಸೋಶಿಯಲ್ ಮೀಡಿಯಾಗಳಿಗೆ ಬಂದು ಸ್ವಲ್ಪ ಸಮಯವಾಗಿದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಿಯೂ ಇಲ್ಲ ಎಂದು ಅವರು ತಮ್ಮ ಪೋಸ್ಟ್ ಅನ್ನು ಪ್ರಾರಂಭಿಸಿದ್ದರು. “ಕಳೆದ ತಿಂಗಳಲ್ಲಿ ನಾನು ಹೆಚ್ಚು ಚಟುವಟಿಕೆಯಿಂದ ಇಲ್ಲದೇ ಇರುವುದಕ್ಕೆ ಕಾರಣವೆಂದರೆ ನನಗೆ ಸಣ್ಣ ಅಪಘಾತವಾಗಿತ್ತು. ನಾನು ಚೇತರಿಸಿಕೊಳ್ಳುತ್ತಿದ್ದೆನೆ. ವೈದ್ಯರು ಹೇಳಿದಂತೆ ಮನೆಯಲ್ಲಿಯೇ ಇರಬೇಕಾಯಿತು. ನಾನು ಈಗ ಉತ್ತಮವಾಗಿದ್ದೇನೆ. ನಾನು ಕೆಲಸಕ್ಕೆ ಮರಳುವ ಹಂತದಲ್ಲಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Bra Varieties: ಬ್ರಾಗಳಲ್ಲಿ ಎಷ್ಟೊಂದು ವಿಧ? ಯಾರಿಗೆ ಯಾವುದು ಸೂಕ್ತ? ಇಲ್ಲಿದೆ ಸಚಿತ್ರ ಮಾಹಿತಿ!

ರಶ್ಮಿಕಾ ತಮ್ಮ ಅಭಿಮಾನಿಗಳಲ್ಲಿ ಆರೋಗ್ಯ ಕಾಳಜಿ ಮೂಡಿಸಿದರು. ಯಾವಾಗಲೂ ನಿಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳಿ. ಜೀವನ ತುಂಬಾ ಚಿಕ್ಕದಾಗಿದೆ . ನಮಗೆ ನಾಳೆ ಇರುತ್ತದೆಯೇ ಎಂದು ನಮಗೆ ತಿಳಿದಿಲ್ಲ ಆದ್ದರಿಂದ ಪ್ರತಿದಿನ ಸಂತೋಷವನ್ನು ಆರಿಸಿ ಎಂದು ನ್ಯಾಷನಲ್ ಕ್ರಶ್‌ ಹೇಳಿಕೊಂಡಿದ್ದಾರೆ. ಕೊನೆಯಲ್ಲಿ ಅವರು ನಗುವಿನ ಎಮೋಜಿ ಜತೆಗೆ, ಸಾಕಷ್ಟು ಲಡ್ಡುಗಳನ್ನು ತಿನ್ನುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಶುಭ ಹಾರೈಸಿದ ಅಭಿಮಾನಿಗಳು

ಪೋಸ್ಟ್ ಲೈವ್ ಆದ ಕೂಡಲೇ, ಅವರ ಕಾಮೆಂಟ್ ವಿಭಾಗವು ಅಭಿಮಾನಿಗಳ ಶುಭ ಹಾರೈಕೆಗಳಿಂದ ತುಂಬಿದವು. ಅಭಿಮಾನಿಗಳೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ‘ನನ್ನ ಮಗಳು ಹಿಂತಿರುಗಿದ್ದಾಳೆ ಮತ್ತು ನೀವು ಈಗ ಚೆನ್ನಾಗಿದ್ದೀರಿ ಎಂದು ನನಗೆ ಸಂತೋಷವಾಗಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ, “ನೀವು ಉತ್ತಮವಾಗಿದ್ದೀರಿ ಎಂದು ಕೇಳಲು ತುಂಬಾ ಸಂತೋಷವಾಗಿದೆ, ರಶ್ಮಿಕಾ! ಲಡ್ಡುಗಳನ್ನು ತಿನ್ನಿ ಎಂದು ಬರೆದಿದ್ದಾರೆ.

ಬೇಗ ಚೇತರಿಸಿಕೊಳ್ಳಿ. ದಣಿಯಬೇಡಿ. ಆರೋಗ್ಯವೇ ಸಂಪತ್ತು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಶೀಘ್ರವಾಗಿ ಚೇತರಿಸಿಕೊಳ್ಖು ಎಂದು ಹಾರೈಸುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ. ನಾವು ನಿಮ್ಮನ್ನು ತುಂಬಾ ಇಷ್ಟಪಡುತ್ತೇನೆ ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. ಅಪಘಾತಗಳು ಕಠಿಣವಾಗಿರಬಹುದು, ಆದರೆ ನೀವು ಹೊಂದಿರುವ ಸಕಾರಾತ್ಮಕತೆ ನೋಡುವುದು ಅದ್ಭುತ ಎಂದು ಹೇಳಿದ್ದಾರೆ.

ರಶ್ಮಿಕಾ ಅವರ ಪ್ರಾಜೆಕ್ಟ್‌ಗಳು

ರಶ್ಮಿಕಾ ಕೊನೆಯ ಬಾರಿಗೆ ರಣಬೀರ್ ಕಪೂರ್ ಅವರೊಂದಿಗೆ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರ. ಮುಂದೆ, ಅವರು ಪುಷ್ಪ 2: ದಿ ರೂಲ್ ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ಸಿಕಂದರ್ ನಲ್ಲಿ ನಟ ಸಲ್ಮಾನ್ ಖಾನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ವಿಕ್ಕಿ ಕೌಶಲ್ ಜತೆಗೆ ಐತಿಹಾಸಿಕ ಚಾವಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.