Sunday, 13th October 2024

ನಟ ಅಲ್ಲು ಅರ್ಜುನ್​ ಬೆಂಬಲಕ್ಕೆ ನಿಂತ ಧಕ್ ಧಕ್ ರವೀನಾ

ಮುಂಬೈ: ಅಲ್ಲು ಅರ್ಜುನ್  ನಟನೆಯ ‘ಪುಷ್ಪ’ ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

 ಸಿನಿಮಾ ರಿಲೀಸ್​ ಆಗಲು ಒಂದು ತಿಂಗಳು ಮಾತ್ರ ಬಾಕಿ ಇದೆ. ಇದೇ ಸಂದರ್ಭ ದಲ್ಲಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಹಿಂದಿ ಅವತರಣಿಕೆ ರಿಲೀಸ್​ ಮಾಡಲು ಇದ್ದ ಸಮಸ್ಯೆಗಳು ಈಗ ಪರಿಹಾರವಾಗಿದೆ.

ಗೋಲ್ಡ್​ಮೈನ್​ ಫಿಲ್ಮ್ಸ್ ಸಂಸ್ಥೆ​ ‘ಪುಷ್ಪ’ದ ಹಿಂದಿ ಅವತರಣಿಕೆಯನ್ನು ಡಿ. 17ರಂದೇ ಬಿಡುಗಡೆ ಮಾಡುತ್ತಿದೆ. ಈ ಸಿನಿಮಾಗೆ ರವೀನಾ ಟಂಡನ್​ ಕುಟುಂಬ ದಿಂದ ಬೆಂಬಲ ಸಿಕ್ಕಿದೆ.

ಈಗಾಗಲೇ ರಿಲೀಸ್​ ಆಗಿರುವ ‘ಪುಷ್ಪ’ ಟೀಸರ್​ ಹಾಗೂ ಪೋಸ್ಟರ್​ಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡಿದೆ. ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಗೆ ಬರುತ್ತಿದೆ. ಕೇವಲ ಒಂದು ತಿಂಗಳು ಸಮಯಾವಕಾಶ ಇರುವುದರಿಂದ ಹಿಂದಿಯಲ್ಲಿ ಸಿನಿಮಾಗೆ ಹೆಚ್ಚು ಪ್ರಚಾರ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗೋಲ್ಡ್​ಮೈನ್​ ಫಿಲ್ಮ್ಸ್ ಎಎ ಫಿಲ್ಸ್ಮ್ಸ್​ ಜತೆ ಕೈ ಜೋಡಿಸಿದೆ.

ಎಎ ಫಿಲ್ಸ್ಮ್ಸ್​ ಒಡೆತನ ರವೀನಾ ಟಂಡನ್​ ಪತಿ ಅನಿಲ್​ ಥಡಾನಿ ಕೈಯಲ್ಲಿದೆ. ‘ಬಾಹುಬಲಿ 2’, ‘ಸಾಹೋ’ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಹಂಚಿಕೆ ಮಾಡಿದ ಅನುಭವ ಅನಿಲ್​ಗೆ ಇದೆ.