Friday, 13th December 2024

ಕ್ರೇಜಿಸ್ಟಾರ್‌ ವಿ.ರವಿಚಂದ್ರನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ ನಡೆಸುತ್ತಿರುವ ಪ್ರಥಮ ಘಟಿಕೋತ್ಸವದಲ್ಲಿ‌ ಸ್ಯಾಂಡಲ್‌ವುಡ್‌ ನಟ, ಕ್ರೇಜಿ ಸ್ಟಾರ್‌ ವಿ.ರವಿಚಂದ್ರನ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.

ಸಮಾಜ ಕ್ಷೇತ್ರದ ಅನುಪಮ ಸೇವೆಗಾಗಿ ರಂ.ಆರ್. ಜೈಶಂಕರ್, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಸತ್ಯನಾರಾಯಣ ಅವರಿಗೆ ಬೆಂಗಳೂರು ನಗರ ವಿವಿ ಡಾಕ್ಟರೇಟ್ ಪ್ರದಾನ ಮಾಡಲಿದೆ.

 

77 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ. ಒಟ್ಟಾರೆ, 41,768 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗು ತ್ತಿದ್ದು, ಇದರಲ್ಲಿ 29,240 ಪದವಿ ಮತ್ತು 12,528 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.