ಹೈದರಾಬಾದ್: ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಡಬಲ್ ಮೀನಿಂಗ್ ಜೋಕ್ ಗಳನ್ನು ಬಳಸುವುದಿಲ್ಲ. ಆದರೆ ನಟಿ ರೆಜಿನಾ ಕಸಾಂಡ್ರಾ ಡಬಲ್ ಮೀನಿಂಗ್ ಜೋಕ್‌ಗಳನ್ನು ಸಿಡಿಸಿದ್ದಾರೆ.
ರೆಜಿನಾ ತನ್ನ ಮುಂಬರುವ ಚಿತ್ರ ಸಾಕಿನಿ ಡಾಕಿನಿಯನ್ನು ತನ್ನ ಸಹ-ನಟಿ ನಿವೇತಾ ಥಾಮಸ್ ಅವರೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡು ವಾಗ ಪುರುಷರನ್ನು ಮ್ಯಾಗಿ ನೂಡಲ್ಸ್‌ಗೆ ಹೋಲಿಸಿ ಹಾಸ್ಯ ಚಟಾಕಿ ಹಾರಿಸಿದರು.
“ನನಗೆ ಹುಡುಗರ ಬಗ್ಗೆ ಒಂದು ತಮಾಷೆ ತಿಳಿದಿದೆ. ಹುಡುಗರು ಮತ್ತು ಮ್ಯಾಗಿ ನೂಡಲ್ಸ್ ಕೇವಲ ಎರಡು ನಿಮಿಷಗಳು ಮಾತ್ರ,” ಎಂದು ಅವರು ತಮಾಷೆ ಮಾಡಿದರು. ರೆಜಿನಾ ಪಕ್ಕದಲ್ಲಿ ಕುಳಿತಿದ್ದ ನಿವೇತಾ ಈ ಡಬಲ್ ಮೀನಿಂಗ್ ಜೋಕ್‌ಗೆ ನಗುವನ್ನು ನಿಯಂತ್ರಿಸಲು ಪ್ರಯತ್ನಿಸಿದರು.