Wednesday, 11th December 2024

66ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ರೇಖಾ

ಮುಂಬೈ: ಅಕ್ಟೋಬರ್ 10ರಂದು ಬಾಲಿವುಡ್ ಹಿರಿಯ ನಟಿ ರೇಖಾ ತಮ್ಮ 66ನೇ ಜನ್ಮದಿನ ಆಚರಿಸಿಕೊಂಡರು. ಈ ಸಂದರ್ಭ ದಲ್ಲಿ ನಟಿ ತಮ್ಮಿಷ್ಟದ ಕಾಂಜೀವರಂ ಸೀರೆಯಲ್ಲಿ ಮಿಂಚುತ್ತಿದ್ದರು.

ತಮ್ಮ ಹುಟ್ಟಹಬ್ಬಕ್ಕೆ ಬರುತ್ತಿರುವ ಶುಭಾಶಯಗಳ ಮಹಾಪೂರದ ಚಿತ್ರ ಹಾಗೂ ವಿಡೀಯೋ ಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಂಡಿದ್ದಾರೆ. ಸಿಸಿಲಾ, ಖೂಬ್‍‍ಸೂರತ್‍, ಉಮ್ರಾವೋ ಜಾನ್ ಹಾಗೂ ಮಿಸ್ಟರ್‍ ನಟ್ವರ್‍‍ಲಾಲ್‍ ಮುಂತಾದ ಚಿತ್ರಗಳು ಇಂದಿಗೂ ಈಗಲೂ ರೇಖಾರವರ ಅಭಿಮಾನಿಗಳ ಮೆಚ್ಚಿನ ಚಿತ್ರಗಳು.

ಈಕೆಯ ಸೌಂದರ್ಯದ ಕುರಿತಂತೆ ಅಭಿಮಾನಿಗಳು ಹಲವು ವರ್ಣಾತೀತ ಶಬ್ದಗಳಲ್ಲಿ ವರ್ಣಿಸಿ ದ್ದಾರೆ. ಆಕೆಯ ವಿದ್ವತ್‍ ಹೋಲಿಸ ಲಾಗದ್ದು, ಆಕೆಯ ಸೌಂದರ್ಯ ಕರೆಂಟ್ ಪಾಸಾದಂತೆ. ಯಾರ ನಟನಾ ವೃತ್ತಿಗೂ ಆಕೆಯನ್ನು ಹೋಲಿಸಲಾಗುವುದಿಲ್ಲ.  ವರ್ಷಗಳೇ ಕಳೆದರೂ, ಆಕೆಯ ಸೌಂದರ್ಯ ಮಾಸುವುದಿಲ್ಲ. ಚಿತ್ರರಂಗದಲ್ಲಿ ಮಾರುತ್ತರಕ್ಕೆ ಬೆಳೆದಿರುವುದನ್ನು ರೇಖಾಳ ಸೌಂದರ್ಯ, ಎತ್ತರ ಮುಂತಾದವುಗಳನ್ನು ಕಂಡೇ ಅರ್ಥೈಸಬಹುದು ಎಂದು ಅಭಿಮಾನಿ ಯೊಬ್ಬರು ಟ್ವೀಟ್‍ ಮಾಡಿದ್ದಾರೆ.