Sunday, 13th October 2024

ಹಕ್ಕು ಚಲಾಯಿಸಿದ ಡಾಲಿ ಧನಂಜಯ್, ರಿಷಬ್​ ಶೆಟ್ಟಿ

ಬೆಂಗಳೂರು: ಟ ರಾಕ್ಷಸ ಡಾಲಿ ಧನಂಜಯ್, ಕಾಂತಾರ ಸ್ಟಾರ್ ರಿಷಬ್​ ಶೆಟ್ಟಿ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದ್ದಾರೆ.

ಕನ್ನಡ ನಟ ಡಾಲಿ ಧನಂಜನಯ್​​ ಅವರು ತಮ್ಮ ಕುಟುಂಬಸ್ಥರೊಂದಿಗೆ ಬಂದು ಅರಸೀಕೆರೆಯ ಕಾಳೇನಹಳ್ಳಿ ಗ್ರಾಮದಲ್ಲಿ ಮತದಾನ ಮಾಡಿದರು. ಬಳಿಕ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಆ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡಿದ್ದಾರೆ. ಮತದಾನದ ಈ ಚಿತ್ರಗಳು ಸಾಮಾಜಿಕ ಜಾಲತಾಣ ದಲ್ಲಿ ವೈರಲ್​ ಆಗುತ್ತಿದೆ.

”ನಾವೆಲ್ಲ Vote ಮಾಡುದ್ವಿ, ನೀವೂ Vote ಮಾಡಿ. Vote ಮಾಡುವವರೆ Dare Devil. ನಾನ್ ಬಿಡಿ ಡೇರ್ ಡೆವಿಲ್, ನೀವು..?” ಎಂದು ಬರೆದುಕೊಂಡು ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಪ್ರತಿ ಯೊಬ್ಬ ಮತದಾರರು ತಮ್ಮ ಮತ ಚಲಾಯಿಸಲು ಸ್ಫೂರ್ತಿ ಆಗಿದ್ದಾರೆ.

ಪ್ರತಿಭಾವಂತ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಕೂಡ ಮತದಾನ ಮಾಡಿದ್ದಾರೆ. ‘

‘ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ.ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ” ಎಂದು ಬರೆದುಕೊಂಡು ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.