ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವೇದಿಕೆಯಲ್ಲೇ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಕಿಸ್ ಮಾಡಿ, ವಿವಾದಕ್ಕೆ ಕಾರಣವಾಗಿದ್ದರು.
ತಮ್ಮ ಪತ್ನಿ ಅಲೆಜಾಂಡ್ರಾ ಸಿಲ್ವಾ ಅವರ 40ನೇ ಹುಟ್ಟುಹಬ್ಬವನ್ನು ನ್ಯೂವೋ ವಲ್ಲರ್ಟಾ ಬಳಿ ಆಚರಿಸಲು ಕುಟುಂಬದೊಂದಿಗೆ ವಕೇಶನ್‌ಗೆಂದು ಹೋಗಿದ್ದಾಗ, ಅನಾರೋಗ್ಯಕ್ಕೆ ತುತ್ತಾಗಿ ಗೇರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಕೇಶನ್‌ಗೆ ಹೋಗುವ ಮೊದಲೇ ನಟ ಕೆಮ್ಮಿನಿಂದ ಬಳಲುತ್ತಿದ್ದು, ಮೆಕ್ಸಿಕೋದಲ್ಲಿದ್ದಾಗ ಅದು ಉಲ್ಬಣ ಗೊಂಡಿತು. ಚಿಕಿತ್ಸೆಯ ಬಳಿಕ ಅವರಿಗೆ ನ್ಯುಮೋನಿಯಾ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಪತ್ನಿ ಅಲೆಜಾಂಡ್ರಾ ಸಿಲ್ವಾ ಇನ್‌ಸ್ಟಾ ಪೋಸ್ಟ್ ಹಂಚಿಕೊಂಡು ʻʻಹುಟ್ಟುಹಬ್ಬದ ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು.ನಮ್ಮ ಕುಟುಂಬದಲ್ಲಿ ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದರು. 3 ವಾರಗಳ ನಂತರ ಇಂದು ನಾನು ಹೆಚ್ಚು ಚೇತರಿಸಿಕೊಂಡಿದ್ದೇನೆ!
ಹಾಲಿವುಡ್ ನಟ ರಿಚರ್ಡ್ ಗೇರ್ ಅವರು ಸಾರ್ವಜನಿಕವಾಗಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ್ದ ಘಟನೆ ವಿವಾದ ಸೃಷ್ಟಿಸಿತ್ತು.