Saturday, 23rd November 2024

Rupali Ganguly: ನನ್ನ ತಂದೆಗೆ ಅಪಾಯಕಾರಿ ಔಷಧ ಕೊಡುತ್ತಿದ್ದಾರೆ…ಖ್ಯಾತ ನಟಿ ವಿರುದ್ಧ ಮಲಮಗಳಿಂದ ಗಂಭೀರ ಆರೋಪ; ಪೋಸ್ಟ್ ವೈರಲ್

Rupali Ganguly

ಮುಂಬೈ : ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅನುಪಮಾ ಧಾರಾವಾಹಿಯಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ಎಲ್ಲರ ಮನಗೆದ್ದವರು ನಟಿ ರೂಪಾಲಿ ಗಂಗೂಲಿ(Rupali Ganguly). ಇವರು ಕಿರುತೆರೆಯ ಅತ್ಯಂತ ಜನಪ್ರಿಯ ಸ್ಟಾರ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ. ವೃತ್ತಿಜೀವನದ ಉತ್ತುಂಗವನ್ನು ಏರುತ್ತಿರುವಾಗ ಸಹನಟರೊಂದಿಗಿನ ಅವರ ನಡವಳಿಕೆಗಳ ಬಗ್ಗೆ ಸಾಕಷ್ಟು ವದಂತಿಗಳು ಆಗಾಗ್ಗೆ ಕೇಳಿಬಂದಿವೆ.  ಆದರೆ ಇತ್ತೀಚೆಗೆ ಅವರ ಮಲಮಗಳು ಇಶಾ ವರ್ಮಾ ಎಂಬುವವರು 2020ರಲ್ಲಿ ಬರೆದ ಪೋಸ್ಟ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Rupali Ganguly

ಇಶಾ ಎಂಬುವವರು ತಮ್ಮ ಪೋಸ್ಟ್‌ನಲ್ಲಿ “ರೂಪಾಲಿ ಗಂಗೂಲಿ ಅವರ ನಿಜವಾದ ಕಥೆ ಯಾರಿಗಾದರೂ ತಿಳಿದಿದೆಯೇ? ಅಶ್ವಿನ್ ಕೆ ವರ್ಮಾ ಅವರನ್ನು ಎರಡನೇ ಮದುವೆಯಾಗುವ ಮೊದಲು ರೂಪಾಲಿ ಅವರು  ಹನ್ನೆರಡು ವರ್ಷಗಳಿಂದ ಅವರೊಂದಿಗೆ ಅಕ್ರಮ ಸಂಬಂಧದಲ್ಲಿದ್ದರು. ಅಶ್ವಿನ್‍ ಅವರಿಗೆ ಮೊದಲ ಮದುವೆಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ನಾನು ರೂಪಾಲಿ ಗಂಗೂಲಿ ಅವರ ಮಲಮಗಳು, ರೂಪಾಲಿ ಅವರು ನನ್ನ ತಂದೆಗೆ ವಿಚಿತ್ರವಾದ ಔಷಧಿಗಳನ್ನು ತಿನ್ನಿಸುತ್ತಿದ್ದಾರೆ. ಅಲ್ಲದೇ ಅವರು ನನ್ನನ್ನು ಮತ್ತು ನನ್ನ ಸಹೋದರಿಯನ್ನು ದೂರಮಾಡಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಅದು ಅಲ್ಲದೇ, ರೂಪಾಲಿ ಹಾಗೂ ಅಶ್ವಿನ್‌ ಅವರು ಸಂತೋಷದಿಂದ ಇದ್ದೇವೆ ಎಂದು ಮಾಧ್ಯಮದ ಮುಂದೆ ಹೇಳುತ್ತಿರುತ್ತಾರೆ ಆದರೆ ವಾಸ್ತವದಲ್ಲಿ ಅವರು ನನ್ನ ತಂದೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ತಂದೆಯ ಜೊತೆ ಮಾತನಾಡಲು ಫೋನ್‌ ಮಾಡಿದರೆ ರೂಪಾಲಿ ಅವರು ಕೂಗಾಡುತ್ತಾರೆ. ಅದು ಅಲ್ಲದೇ, ನನ್ನ ತಾಯಿಗೆ ಕೊಲೆ ಬೆದರಿಕೆಗಳನ್ನು ಹಾಕುತ್ತಾರೆ. ತಂದೆಯಿಲ್ಲದೇ ನಾನು ಜೀವನದಲ್ಲಿ ತುಂಬಾ ಕಷ್ಟಪಟ್ಟಿದ್ದೇನೆ” ಎಂದು ಇಶಾ ಅವರ ಪೋಸ್ಟ್‌ನಲ್ಲಿದೆ.  

Rupali Ganguly

ಆದರೆ ಇಷ್ಟೆಲ್ಲಾ ಬರೆದು ಪೋಸ್ಟ್ ಮಾಡಿರುವ ಇಶಾ ಅವರು  2021ರಲ್ಲಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ರೂಪಾಲಿ ಮತ್ತು ಅಶ್ವಿನ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿ ಅವರನ್ನು ‘ಪೋಷಕರು’ ಎಂದು ಪ್ರೀತಿಯಿಂದ ಕರೆದಿದ್ದಾರೆ.

ಇದನ್ನೂ ಓದಿ:  ಕಾಲಲ್ಲಿ ಸರಪಳಿ… ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಕೈದಿ ಎಸ್ಕೇಪ್- ವಿಡಿಯೋ ಇದೆ

ಈ ಆರೋಪಗಳಿಗೆ ರೂಪಾಲಿ ಗಂಗೂಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರ ಪತಿ ಅಶ್ವಿನ್ ವರ್ಮಾ ಇದಕ್ಕೆ ಪ್ರತಿಕ್ರಿಯಿಸಿ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ಹಿಂದಿನ ಸಂಬಂಧಗಳಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ರೂಪಾಲಿ ಮತ್ತು ನಾನು ಯಾವಾಗಲೂ ಅವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ಆದರೆ ಡೈವೋರ್ಸ್‍ನಿಂದ ತಂದೆ ತಾಯಿ ಬೇರೆಯಾಗುತ್ತಾರೆ ಎಂದು ನನ್ನ ಕಿರಿಯ ಮಗಳು ಸಾಕಷ್ಟು ನೋವನ್ನು ವ್ಯಕ್ತಪಡಿಸಿದ್ದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ವಿವಾಹ ಸಂಬಂಧ ಅನೇಕ ಕಾರಣಗಳಿಂದ  ಕೊನೆಗೊಳ್ಳುತ್ತವೆ. ಆದರೆ ನನ್ನ ಎರಡನೇ ಹೆಂಡತಿಯೊಂದಿಗಿನ ನನ್ನ ಸಂಬಂಧವು ಅನೇಕ ಸವಾಲುಗಳನ್ನು ಎದುರಿಸಿತ್ತು. ನನ್ನ ಮಕ್ಕಳು ಮತ್ತು ನನ್ನ ಹೆಂಡತಿಗೆ ಉತ್ತಮವಾದದ್ದನ್ನು ಮಾತ್ರ ನಾನು ಬಯಸುತ್ತೇನೆ ಮತ್ತು ಮಾಧ್ಯಮಗಳು ಈ ಬಗ್ಗೆ ನಕರಾತ್ಮಕವಾಗಿ ಮಾತನಾಡುವುದು ನನಗೆ ದುಃಖ ತಂದಿದೆ” ಎಂದು ತಿಳಿಸಿದ್ದಾರೆ.