Friday, 13th December 2024

Rupali Ganguly: ಮಲ ಮಗಳ ಮೇಲೆಯೇ 50 ಕೋಟಿ ರೂ. ಮಾನನಷ್ಟ ಕೇಸ್ ಹಾಕಿದ ಖ್ಯಾತ ಕಿರುತೆರೆ ನಟಿ!

ಮುಂಬೈ: ಪ್ರತಿನಿತ್ಯ ಗ್ಲಾಮರ್ ಲೋಕಕ್ಕೆ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ ಇಲ್ಲಿ ಹೆಸರು ಮಾಡಲು ಖ್ಯಾತಿ ಗಳಿಸಲು ಅಷ್ಟು ಸುಲಭವಲ್ಲ. ಸೌಂದರ್ಯ, ಹಣ ಇದ್ದ ಮಾತ್ರಕ್ಕೆ ಹೆಸರು ಗಳಿಸುತ್ತೇವೆಂಬುದು ಬರೀ ಭ್ರಮೆಯಷ್ಟೆ. ಸಿನಿಮಾ ಲೋಕದಲ್ಲಿ ಹೆಸರು ಗಳಿಸಲು ಹಗಲಿರುಳು ಶ್ರಮಿಸಬೇಕು ಇಷ್ಟಾಗಿಯೂ ಅವರು ಯಶಸ್ವಿಯಾಗುತ್ತಾರೆ ಎಂದೇನಿಲ್ಲ. ಅದರಲ್ಲಿ ಕೆಲವೇ ಜನರು ಯಶಸ್ವಿಯಾಗುತ್ತಾರೆ. ಉಳಿದವರು ಹೇಳಹೆಸರಲ್ಲಿದಂತೆ ಕಣ್ಮರೆಯಾಗುತ್ತಾರೆ. ಒಂದು ಕಾಲದಲ್ಲಿ ಖಾಲಿ ಜೇಬು, ಹಸಿದ ಹೊಟ್ಟೆಯಲ್ಲಿ ಬಂದವರು ಇಂದು ಗ್ಲಾಮರ್ ಜಗತ್ತಿನಲ್ಲಿ ಮಿಂಚಿ ಅಗರ್ಭ ಶ್ರೀಮಂತರಾಗಿದ್ದಾರೆ. ಕೇವಲ 50 ರೂ. ಸಂಪಾದನೆಗೆ ಪ್ರತಿನಿತ್ಯ 15ಕಿಮೀ ಕ್ರಮಿಸುತ್ತಿದ್ದ ಅನುಪಮಾ ಖ್ಯಾತಿಯ ಈ ಸುಂದರಿ ಇಂದು ತನ್ನ ಪರಿಶ್ರಮ, ನಟನಾ ಕೌಶಲ್ಯದಿಂಧ ಒಂದು ಎಪಿಸೋಡ್‌ಗೆ ಲಕ್ಷ ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆ.

ಹೌದು ಇಂದು ಕಿರುತೆರೆಯಲ್ಲಿ ಪ್ರಾಬಲ್ಯ ಹೊಂದಿರುವ ಪ್ರತಿಭಾವಂತ ನಟಿಯರಲ್ಲಿ ರೂಪಾಲಿ ಗಂಗೂಲಿ(Rupali Ganguly) ಒಬ್ಬರು. ಅವರು ಹುಟ್ಟುತ್ತಲೇ ಕಠಿಣಹಾದಿ ಸವೆಸಿದವರು. ಕಠಿಣ ಪರಿಶ್ರಮದ ಫಲವಾಗಿ ಇಂದು ಕಿರುತೆರೆಯಲ್ಲಿ ಮೂಡಿಬರುತ್ತಿರುವ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಅನುಪಮಾ’ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ನಟಿ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ.

ಇಷ್ಟೆಲ್ಲಾ ಹೆಸರು ಖ್ಯಾತಿ ಗಳಿಸಿರುವ ರೂಪಾಲಿ ಕಳೆದ ಕೆಲ ದಿನಗಳಿಂದ ಭಾರೀ ಚರ್ಚೆಯಲ್ಲಿದ್ದು, ರೂಪಾಲಿ ಅವರ ವಿರುದ್ದ ಅವರ ಮಲಮಗಳು(stepdaughter) ಇಶಾ ವರ್ಮಾ(Isha Varma) ಗಂಭೀರ ಆರೋಪ ಮಾಡಿದ ಸುದ್ದಿ ಭಾರೀ ವೈರಲ್ ಆಗಿತ್ತು. ರೂಪಾಲಿ ಅವರು ತಮ್ಮ ಮನೆಯನ್ನು ಒಡೆದಿದ್ದಾರೆ ಎಂದು ಆರೋಪಿಸಿದಲ್ಲದೇ, ರೂಪಾಲಿ ತನಗೆ ಹಾಗೂ ತನ್ನ ತಾಯಿಗೆ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಇಶಾ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಇಶಾ ವರ್ಮಾ ತಮ್ಮ ತಂದೆ ಅಶ್ವಿನ್ ಕೆ ವರ್ಮಾ ಮತ್ತು ತಾಯಿ ಸಂತೋಷದಿಂದ ಬದುಕುತ್ತಿದ್ದರು. ಆದರೆ ಅಶ್ವಿನ್‌ಗೆ ಮದುವೆಯಾಗಿ ಮಗಳಿದ್ದಾರೆ ಎಂದು ತಿಳಿದರೂ ರೂಪಾಲಿ ಅವರೊಂದಿಗೆ ಸಂಬಂಧ ಬೆಳೆಸಿದಳು. ತನ್ನನ್ನು ಮತ್ತು ತನ್ನ ತಾಯಿ ಇಬ್ಬರನ್ನೂ ನಿಂದಿಸಿದರು. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಇಶಾ ಆರೋಪಿಸಿದರು.

ಮಲ ಮಗಳು ಇಷ್ಟು ಆರೋಪ ಮಾಡಿದರೂ ಮೌನ ವಹಿಸಿದ ರೂಪಾಲಿ ಇದೀಗ ಏಕಾಏಕಿ ಇಶಾ ಅವರ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೌದು ಇಶಾ ಮಾಡಿರುವ ಆರೋಪಗಳಿಗೆ ರೂಪಾಲಿ ಕಾನೂನಿನ ಮೂಲಕ ಉತ್ತರ ನೀಡಲು ಮುಂದಾಗಿದ್ದು, ತನ್ನ ಕಾನೂನು ಸಲಹೆಗಾರ ಸೆಲೆಬ್ರಿಟಿ ವಕೀಲ ಸನಾ ರಯೀಸ್ ಖಾನ್ ಜೊತೆ ಚರ್ಚಿಸಿ ಅವರ ಸಲಹೆ ಮೇರೆಗೆ ನವೆಂಬರ್ 11 ರಂದು ಇಶಾ ವಿರುದ್ದ ಪ್ರಕರಣವನ್ನು ಮಾನನಷ್ಟ(defamation) ಕೇಸ್(case) ದಾಖಲಿಸಿದ್ದಾರೆ.

ಇಶಾ ನೀಡಿರುವ ಹೇಳಿಕೆಗಳಿಂದ ರೂಪಾಲಿ ಗಂಗೂಲಿ ಅವರ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸುಖಾಸುಮ್ಮನೆ ಅವರ ಕುಟುಂಬದ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಇಶಾ, ರೂಪಾಲಿ 11 ವರ್ಷದ ಮಗನ ಬಗ್ಗೆ ಕಾಮೆಂಟ್ ಮಾಡಿದ್ದು, ಇದರಿಂದ ರೂಪಾಲಿ ಅವರ ಮನಸ್ಸಿಗೆ ಘಾಸಿ ಉಂಟಾಗಿದೆ ಎಂದಿದ್ದಾರೆ.

ಹಾಗಾಗಿ ಇಶಾ ಮೇಲೆ ಈ ಕ್ರಮ ತೆಗೆದುಕೊಳ್ಳಲು ರೂಪಾಲಿ ನಿರ್ಧರಿಸಿದ್ದು, ನಾವು ಅವರ ಮಲ ಮಗಳ ಸುಳ್ಳು ಮತ್ತು ಹಾನಿಕಾರಕ ಹೇಳಿಕೆಗಳಿಗೆ ಪ್ರತಿಯಾಗಿ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದೇವೆ ಎಂದು ವಕೀಲ ಸನಾ ರಯೀಸ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Abhishek Ambareesh: ಅಭಿಷೇಕ್ ಅಂಬರೀಶ್-‌ ಅವಿವಾ ದಂಪತಿಗೆ ಗಂಡು ಮಗು, ಮೊಮ್ಮಗನ ಜೊತೆ ಸುಮಲತಾ ಪೋಸ್‌