Wednesday, 11th December 2024

Bigg Boss Tamil 8: ಬಿಗ್ ಬಾಸ್ ಇತಿಹಾಸದಲ್ಲೇ ಶಾಕಿಂಗ್ ನಿರ್ಧಾರ: ಕೇವಲ 24 ಗಂಟೆಯಲ್ಲಿ ಸ್ಪರ್ಧಿ ಎಲಿಮಿನೇಟ್

BB Tamil

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಇದೀಗ ಕನ್ನಡ ಸೇರಿದಂತೆ ತಮಿಳು ಮತ್ತು ಹಿಂದಿಯಲ್ಲೂ ಪ್ರಾರಂಭವಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಳ್ಳುತ್ತಿದ್ದರೆ, ತಮಿಳಿನಲ್ಲಿ ಇದೇ ಮೊದಲ ಬಾರಿಗೆ ವಿಜಯ್ ಸೇತುಪತಿ ನಿರೂಪಕರಾಗಿದ್ದಾರೆ. ತಮಿಳು ಬಿಗ್ ಬಾಸ್ ಸೀಸನ್ 8 ಆಕ್ಟೋಬರ್ 6 ರಂದು ಶುರುವಾಯಿತು. ಆದರೆ, ಶೋ ಆರಂಭವಾದ 24 ಗಂಟೆಯೊಳಗೆನೇ ಓರ್ವ ಸ್ಪರ್ಧಿ ಮನೆಯಿಂದ ಔಟ್ ಆಗಿದ್ದಾರೆ. ಅಚ್ಚರಿಯಾದರೂ ಇದು ಸತ್ಯ.

ಇಷ್ಟು ವರ್ಷ ಕಮಲ್ ಹಾಸನ್ ಬಿಗ್ ಬಾಸ್ ತಮಿಳು ಶೋ ನಡೆಸಿಕೊಡುತ್ತಿದ್ದರು. ಆದರೆ, ಈ ಬಾರಿ ಕಾರಣಾಂತರಗಳಿಂದ ಅವರ ಬದಲು ಮೊದಲ ಬಾರಿಗೆ ವಿಜಯ್ ಸೇತುಪತಿ ಸಾರಥ್ಯ ವಹಿಸಿಕೊಂಡಿದ್ದಾರೆ. ಶೋ ಆರಂಭದಲ್ಲೇ ಅವರು ಈ ಬಾರಿಯ ಸೀಸನ್​ನಲ್ಲಿ ಕೆಲವು ಮಹತ್ವದ ಬದಲಾವಣೆಗಳು ನಡೆಯಲಿವೆ ಎಂದಿದ್ದರು. ಅದರಂತೆ ಬಿಗ್​ ಬಾಸ್​ ಕಾರ್ಯಕ್ರಮದ ಹೋಸ್ಟ್ ಆದ 24 ಗಂಟೆಯೊಳಗೆ  ದೊಡ್ಮನೆಯಿಂದ ನಟಿ ಔಟ್ ಆಗಿದ್ದಾರೆ.

ಮೊದಲ ದಿನ 18 ಮಂದಿ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ವೇದಿಕೆಯಿಂದ ಹೋಗುವಾಗ ಸೇತುಪತಿ ಎಲ್ಲರಿಗೂ ಒಂದೊಂದು ಟ್ರೋಫಿಯನ್ನು ಕೊಟ್ಟು ಕಳಿಸಿದ್ದರು. ಅತ್ತ ಮನೆಯಲ್ಲಿ ಮೊದಲ ದಿನವೇ ಸದಸ್ಯರಿಗೆ ಕಠಿಣ ಟಾಸ್ಕ್ ನೀಡಲಾಯ್ತು. ಒಂದೇ ದಿನಕ್ಕೆ ಎಲ್ಲರೂ ಸೇರಿ ಒಬ್ಬರನ್ನು ನಾಮಿನೇಟ್ ಮಾಡಿ ಅವರನ್ನು ಮನೆಯಿಂದ ಹೊರಗೆ ಕಳಿಸಬೇಕು ಎಂಬ ಆದೇಶ ಬಿಗ್ ಬಾಸ್​ನಿಂದ ಬಂದಿತ್ತು.

ಅದರಂತೆ ಮೊದಲ ದಿನವೇ ಸ್ಪರ್ಧಿಗಳಿಂದ ನಾಮಿನೇಟ್ ಆಗಿ ನಟಿ ಸಚಾನಾ ನಮಿದಾಸ್ ಬಿಗ್​ಬಾಸ್ ಮನೆಗೆ ಹೋದ ಒಂದೇ ದಿನಕ್ಕೆ ಹೊರಗೆ ಬಂದಿದ್ದಾರೆ. ಸೇತುಪತಿ ನೀಡಿದ್ದ ಟ್ರೋಫಿಯನ್ನು ಅಲ್ಲಿಯೇ ಒಡೆದು ಹಾಕಿ ಹೊರಗೆ ಬಂದಿದ್ದಾರೆ.

ತಮಿಳಿನಲ್ಲಿ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿದ್ದ ಸಿನಿಮಾ ಮಹಾರಾಜದಲ್ಲಿ ವಿಜಯ್ ಸೇತುಪತಿ ಅವರ ಮಗಳ ಪಾತ್ರದಲ್ಲಿ ಸಚಾನಾ ನಮಿದಾಸ್ ಅದ್ಭುತವಾಗಿ ನಟಿಸಿದ್ದರು. ಇವರು ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ. ಸಚಾನಾ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಕಪ್ ಗೆಲ್ಲುತ್ತಾರೆ ಎಂದೇ ಭರವಸೆ ಇಡಲಾಗಿತ್ತು. ಆದರೆ, ಒಂದೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಇವರ ಪ್ರಯಾಣ ಕೊನೆಗೊಂಡಿದೆ.

BBK 11 Nomination: ದೊಡ್ಮನೆಯಲ್ಲಿ ಎಲ್ಲರೂ ನಾಮಿನೇಟ್: ಬಿಗ್ ಬಾಸ್ ನೀಡಿದ ಕಾರಣ ಕೇಳಿ ಶಾಕ್ ಆದ ಸ್ಪರ್ಧಿಗಳು