Friday, 13th December 2024

ಟಾಲಿವುಡ್‌ ನಟ ಸಾಯಿ ಧರಂ ತೇಜ್ ಡಿಸ್ಚಾರ್ಜ್‌

ಹೈದರಾಬಾದ್: ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾಗಿ ಹೈದರಾಬಾದ್ʼನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್‌ ನಟ ಸಾಯಿ ಧರಂ ತೇಜ್ ಒಂದು ತಿಂಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ನಟ ಸಾಯಿ ತೇಜ್ʼನೊಂದಿಗಿರುವ ಫೋಟೋ ಹಂಚಿಕೊಂಡಿರುವ ನಟ ಚಿರಂಜೀವಿ, ಪವಾಡ ಸದೃಶವಾಗಿ ಪಾರಾಗಿದ್ದಾರೆ ಎಂದು ಬರೆದಿದ್ದಾರೆ. ಸೆಪ್ಟೆಂಬರ್ 10 ರಂದು, ಈ ನಟ ಬೈಕ್ ಅಪಘಾತ ಕ್ಕೀಡಾಗಿದ್ದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿರುವ ಸಾಯಿ ಧರಮ್ ತೇಜ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳಿಗೆ ನೆಚ್ಚಿನ ನಟನಿಗೆ ಶುಭಹಾರೈಸಿದ್ದು, ಇದು ಪುನರ್ಜನ್ಮ ಎಂದು ಹೇಳಿದ್ದಾರೆ.