Thursday, 3rd October 2024

Salman-Aishwarya: ಸಲ್ಲು-ಐಶ್ವರ್ಯ ಪ್ರೇಮ್‌ ಕಹಾನಿ ಶುರುವಾಗಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ

Salman Khan

ಮುಂಬೈ: ಬಾಲಿವುಡ್‌ನ ಅನೇಕ ಸೂಪರ್‌ ಹಿಟ್‌ ಜೋಡಿಗಳಲ್ಲಿ ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯ ರೈ(Salman-Aishwarya) ಕೂಡ ಒಂದು. ಬ್ರೇಕಪ್‌ ಆಗಿ ಇಷ್ಟು ವರ್ಷಗಳೇ ಉರುಳಿದರೂ ಇಬ್ಬರು ಪರಸ್ಪರ ದೂರಾಗಿ ತಮ್ಮ ತಮ್ಮ ಬಹುಕಿನಲ್ಲಿ ಬ್ಯುಸಿಯಾಗಿದ್ದರೂ ಈ ಜೋಡಿ ಬಗೆಗಿನ ಚರ್ಚೆಗಳೂ ಮಾತ್ರ ಇಲ್ಲುತ್ತಲೇ ಇಲ್ಲ. ಈ ಕ್ಯೂಟ್‌ ಕಪಲ್‌ ಪ್ರೇಮ್‌ ಕಹಾನಿ ಯಾವ ಸಿನಿಮಾಗಿಂತಲೂ ಕಮ್ಮಿ ಇಲ್ಲ. ಹಾಗಿದ್ದರೆ ಈ ಲವ್‌ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ಇಲ್ಲಿದ ಕಂಪ್ಲೀಟ್‌ ಡಿಟೇಲ್ಸ್‌.

ಐಶ್ವರ್ಯ ಮತ್ತು ಸಲ್ಮಾನ್‌ ಖಾನ್‌ ನಡುವೆ ಪ್ರೀತಿ ಹೇಗೆ ಶುರುವಾಯ್ತು ಎಂಬ ಬಗ್ಗೆ ಸಲ್ಲು ಎಕ್ಸ್‌ ಗರ್ಲ್‌ಫ್ರೆಂಡ್‌ ಸೋಮಿ ಅಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದುಕೊಂಡೇ ಸಲ್ಲು ಐಶ್ವರ್ಯ ಜತೆ ಡೇಟಿಂಗ್‌ ಶುರು ಮಾಡಿದ್ದರು ಎಂದು ಸೋಮಿ ಸ್ಫೋಟಕ ವಿಚಾರವೊಂದು ಬಯಲು ಮಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಸೋಮಿ, ತಮ್ಮ ಮತ್ತು ಸಲ್ಮಾನ್‌ ಖಾನ್‌ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಅವರು 1999 ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ ನಂತರ ಡೇಟಿಂಗ್ ಪ್ರಾರಂಭಿಸಿದ್ದರು ಎಂದು ಸೋಮಿ ಹೇಳಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಾನು ಸಲ್ಮಾನ್‌ ಖಾನ್‌ಗೆ ಕರೆ ಮಾಡಿದ್ದೆ. ಅವರು ಫೋನ್‌ ಪಿಕ್‌ ಮಾಡಲಿಲ್ಲ. ಆಮೇಲೆ ನಾನು ಸಂಜಯ್‌ ಲೀಲಾ ಬನ್ಸಾಲಿಗೆ ಕರೆ ಮಾಡಿದಾಗ ಸಲ್ಮಾನ್‌ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ ಈಗ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ನನಗೆ ಬಹಳ ಬೇಸರ ಆಯ್ತು. ಇದಾದ ಬಳಿಕ ಐಶ್ವರ್ಯ ಸಲ್ಮಾನ್‌ ಹೋಗುತ್ತಿದ್ದ ಜಿಮ್‌ ಗೆ ಬರಲು ಶುರುಮಾಡಿದರು. ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯಾ ಮತ್ತು ಸಲ್ಮಾನ್ ಪ್ರೀತಿಯಲ್ಲಿ ಬಿದ್ದಿದ್ದರು. ನನಗೆ ಸಲ್ಮಾನ್‌ ಖಾನ್‌ ಅವರ ಕೆಲಸದವರು ಈ ಬಗ್ಗೆ ಮಾಹಿತಿ ನೀಡಿದ್ದರು. ಅವರಿಬ್ಬರ ನಡುವೆ ಪ್ರೀತಿ ಅರಳಿದೆ..ನಾನಿನ್ನು ಹೊರಡುವ ಸಮಯ ಅಂತ ನನಗೆ ಅರ್ಥ ಆಯಿತು ಎಂದು ಸೋಮಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಆದರೆ ಸ್ವಲ್ಪ ಸಮಯದ ನಂತರ, 2002 ರಲ್ಲಿ, ಜಗಳಗಳು ಮತ್ತು ಕೆಟ್ಟ ಹೆಸರುಗಳಿಂದ ಇಬ್ಬರ ನಡುವಿನ ಸಂಬಂಧವು ಮುರಿದುಹೋಯಿತು, ಅದು ಸಾಕಷ್ಟು ಚರ್ಚೆಯಾಯಿತುಇವರಿಬ್ಬರ ಬ್ರೇಕಪ್‌ನ ನಂತರ ಐಶ್ವರ್ಯ ಹೆಸರು ಹಲವರ ಜೊತೆ ತಳುಕು ಹಾಕಿಕೊಂಡಿತು. ನಂತರ ನಟಿ 2007ರಲ್ಲಿ ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್‌ ಕೊಟ್ಟಿದ್ದರು. ಇದೀಗ ಈ ಜೋಡಿಗೆ ಒಬ್ಬ ಮಗಳಿದ್ದಾಳೆ. ಆದರೆ ಸಲ್ಮಾನ್‌ ಖಾನ್‌ ಮಾತ್ರ ಇನ್ನೂ ಕೂಡ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದಾರೆ.

ಈ ಸುದ್ದಿಯನ್ನೂ ಓದಿ: Salman Khan: ಹಳೆಯ ಕಹಿ ನೆನಪು ಮರೆತು ಮಲೈಕಾ ಮನೆಗೆ ಭೇಟಿ ನೀಡಿದ ಸಲ್ಮಾನ್ ಖಾನ್