Tuesday, 12th November 2024

Bigg Boss: ಈ ಬಾರಿಯ ಬಿಗ್ ಬಾಸ್​ ಜೈಲಿನಲ್ಲಿ ಫೋನ್ ಸೌಲಭ್ಯ: ಹೊರಬಿತ್ತು ಶಾಕಿಂಗ್ ವಿಚಾರ

Bigg Boss Phone

ಹಿಂದಿ ಕಿರುತೆರೆ ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) 18 ನಾಳೆಯಿಂದ (ಅ. 6) ಪ್ರಾರಂಭವಾಗಲಿದೆ. ಕಾರ್ಯಕ್ರಮದ ಪ್ರೀಮಿಯರ್ ಎಪಿಸೋಡ್ ಜಿಯೋ ಸಿನಿಮಾ ಮತ್ತು ಕಲರ್ಸ್ ಟಿವಿಯಲ್ಲಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಈ ಬಾರಿ ಕೂಡ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಸೀಸಸ್​ನಲ್ಲಿ ಭಾಗವಹಿಸಲಿರುವ ಕೆಲವು ಸೆಲೆಬ್ರಿಟಿಗಳ ಹೆಸರು ಪ್ರಕಟಿಸಲಾಗಿದೆ. ಜೊತೆಗೆ ಮನೆಯೊಳಗಿನ ಫೋಟೋಗಳು, ವಿಡಿಯೋ ಕೂಡ ಬಹಿರಂಗವಾಗಿದೆ.

ವಿಶೇಷ ಎಂದರೆ ಈ ಬಾರಿಯ ಬಿಗ್ ಬಾಸ್ 18ರ ಜೈಲು ಕಾನ್ಸೆಪ್ಟ್​​ ಹೆಚ್ಚು ಚರ್ಚೆಯಾಗುತ್ತಿದೆ. ಬಿಗ್ ಬಾಸ್ 18 ರ ಬಗ್ಗೆ ಸುದ್ದಿ ನೀಡುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಬಿಗ್ ಬಾಸ್ ತನ್ನ ಪೋಸ್ಟ್‌ಗಳಲ್ಲಿ ಮನೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಇದರ ಮೂಲಕ ಮನೆಯ ಜೈಲಿನ ಒಳಗಡೆ ಫೋನ್ ಇರಲಿದೆ ಎಂದು ಹೇಳಿದೆ.

ಬಿಗ್ ಬಾಸ್ ಮನೆಯೊಳಗೆ ಫೋನ್​ನಿಂದ ಹಿಡಿದು ವಾಚ್, ಕ್ಯಾಲೆಂಡರ್ ವರೆಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದಿಲ್ಲ ಎಂಬುದು ಗೊತ್ತೇ ಇದೆ. ಆದರೆ ಬಿಗ್ ಬಾಸ್ ಒಟಿಟಿ ಸೀಸನ್ ಮೂರರಲ್ಲಿ ಮನೆಯೊಳಗೆ ಸೆಲ್ ಫೋನ್ ಸೌಲಭ್ಯವನ್ನು ನೀಡಲಾಗಿತ್ತು. ಈಗ ಬಿಗ್ ಬಾಸ್ 18 ರಲ್ಲೂ ಆಟಗಾರರಿಗೆ ಕೆಲವು ಷರತ್ತುಗಳೊಂದಿಗೆ ಫೋನ್ ಸೌಲಭ್ಯವನ್ನು ನೀಡಲಾಗುತ್ತದೆ.

ಗಮನಿಸಬೇಕಾದ ಅಂಶವೆಂದರೆ ಈ ಫೋನ್ ಅನ್ನು ಜೈಲಿನೊಳಗೆ ಅಳವಡಿಸಲಾಗಿದೆ. ಹಿಂದಿನ ಕಾಲದ ಲುಕ್ ಹೊಂದಿರುವ ಈ ಫೋನ್ ಸಾಕಷ್ಟು ದೊಡ್ಡದಾಗಿದೆ. ಈ ಫೋನ್ ಅನ್ನು ಗುಹೆಯ ಜೈಲಿನ ಒಂದು ಗೋಡೆಯ ಮೇಲೆ ಸ್ಲ್ಯಾಬ್‌ನಲ್ಲಿ ಇರಿಸಲಾಗಿದೆ. ಬಿಗ್ ಬಾಸ್ ಎಕ್ಸ್​ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡುವ ಜೊತೆಗೆ ಹೀಗೆ ಬರೆದುಕೊಂಡಿದೆ. “ಬಿಗ್ ಬಾಸ್‌ನಲ್ಲಿ ಈ ವರ್ಷದ ದೊಡ್ಡ ಆಶ್ಚರ್ಯವೆಂದರೆ ಜೈಲು ಕಾನ್ಸೆಪ್ಟ್ ಮರಳಿ ತಂದಿರುವುದು. ಈ ಬಾರಿ ಇದನ್ನು ಬಿಗ್ ಬಾಸ್ ಮನೆಯ ಮಧ್ಯದಲ್ಲಿ ಮಾಡಲಾಗಿದೆ. ಅಡಿಗೆ ಮಾಡುವ ಜಾಗದ ಮುಂಭಾಗದಲ್ಲಿ ಇರಿಸಲಾಗಿದೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಫೋನ್ ಕೊಟ್ಟಿದ್ದಾರೆ. ಆದರೆ ಅದರ ಉಪಯೋಗವೇನು ಎಂಬುದು ದೊಡ್ಡ ಪ್ರಶ್ನೆ’’ ಎಂದು ಬರೆಯಲಾಗಿದೆ.

ಈ ಪೋಸ್ಟ್ ಪ್ರಕಾರ, ಬಿಗ್ ಬಾಸ್ ಜೈಲಿನ ಒಳಗೆ ಹೋದ ಖೈದಿಯೊಂದಿಗೆ ಮಾತನಾಡಲು ಮತ್ತು ಏನಾದರು ಸೂಚನೆಗಳನ್ನು ನೀಡಲು ಫೋನ್ ಬಳಸುತ್ತಾರೆ. ಈ ಫೋನ್ ಸಂಪೂರ್ಣವಾಗಿ ಬಿಗ್ ಬಾಸ್ ಕಂಟ್ರೋಲ್​ನಲ್ಲಿರುತ್ತದೆ. ಹೊರಗಿನವರ ಜೊತೆ ಸಂಪರ್ಕ ಮಾಡಲು ಸಾಧ್ಯವಿಲ್ಲ. ಆದರೆ, ಈ ಫೋನ್​ನ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬರಬೇಕು.

ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗದೀಶ್: ಮಹಿಳೆಯರ ಒಳ ಉಡುಪಿನ ಬಗ್ಗೆ ಕೀಳು ಮಾತು